9 ತಿಂಗಳಲ್ಲಿ 8 ಅಂತಸ್ತು ಕಟ್ಟಿದ್ರು!

ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ವಸತಿ ಸಂಕೀರ್ಣ ನಿರ್ಮಿಸಲು ನಿರಂತರ ಕಾಮಗಾರಿ ನಡೆದರೂ 2-3 ವರ್ಷ ಬೇಕು. ಆದರೆ ಇಂತಹ...
ಯೇನಪೋಯಾ ವಿಶ್ವವಿದ್ಯಾಲಯ
ಯೇನಪೋಯಾ ವಿಶ್ವವಿದ್ಯಾಲಯ
ಮಂಗಳೂರು:  ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ವಸತಿ ಸಂಕೀರ್ಣ ನಿರ್ಮಿಸಲು ನಿರಂತರ ಕಾಮಗಾರಿ ನಡೆದರೂ 2-3 ವರ್ಷ ಬೇಕು. ಆದರೆ ಇಂತಹ ಅಪಾರ್ಟ್‍ಮೆಂಟ್ ಕೇವಲ 9 ತಿಂಗಳಲ್ಲಿ ಸಿದ್ದವಾಗಿದೆ. ಇದು ಫ್ಯಾಕ್ಟರಿಯಲ್ಲಿ ತಯಾರಾದ ದೇಶದ ಮೊದಲ ವಸತಿ ಸಮುಚ್ಛಯ! ಮಂಗಳೂರಿನಿಂದ 15 ಕಿ.ಮೀ. ದೂರದ ಮಾಣಿ-ಉಳ್ಳಾಲ ರಸ್ತೆಯಲ್ಲಿ ತೊಕ್ಕೊಟ್ಟು ಸಮೀಪ ದೇರಳಕಟ್ಟೆಯಲ್ಲಿ ಈ ಬೃಹತ್ ವಸತಿ ಉದ್ಘಾಟನೆಗೆ (ಬುಧವಾರ, ಅ.21)ಸಜ್ಜಾಗಿದೆ. ಯೇನಪೋಯಾ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ನಿರ್ಮಾಣಗೊಂಡ ವಸತಿ ಸಮುಚ್ಛಯ ಇದು. ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಿಶೇಷ ರೀತಿಯಲ್ಲಿ ಅಚ್ಚುಹಾಕಿಸಿದ ಸಿಮೆಂಟ್ ರಚನೆಯನ್ನು ಇಲ್ಲಿ ತಂದು ಜೋಡಿಸಲಾಗಿದೆ. ಒಟ್ಟು 8 ಅಂತಸ್ತಿನ ಮಹಡಿಯನ್ನು 9 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಅಂದಹಾಗೆ ಇದಕ್ಕೆ ಆಗಿರುವ ವೆಚ್ಚ ರು.14 ಕೋಟಿ.
96 ಮನೆ
ವಸತಿ ಸಮುಚ್ಛಯದಲ್ಲಿ ಪ್ರತಿ ಅಂತಸ್ತಿನಲ್ಲಿ 2 ಬೆಡ್‍ರೂಂನ 12 ಮನೆಗಳಿವೆ. ಇದರ ಗೋಡೆ,ಹಾಲೋ ಕೋರ್ ಸ್ಲ್ಯಾಬ್, ಬಾತ್‍ರೂಂ, ಕಿಟಕಿ, ಬಾಗಿಲುಗಳು ಕೂಡ ಘಟಕದಲ್ಲೇ ನಿರ್ಮಾಣವಾಗಿದೆ. ಪ್ರತಿ ಮನೆಯಲ್ಲೂ ಎರಡು ಬೆಡ್‍ರೂಂ, ಹಾಲ್, ಅಡುಗೆ ಮನೆ, ಮೂರು ಕಿಟಕಿ, ಎರಡು ಟಾಯ್ಲೆ ಟ್‍ಗಳಿವೆ.
ಆಫ್  ಸೈಟ್ ನಿರ್ಮಾಣ ತಂತ್ರಜ್ಞಾನ ಉಪಯೋಗಿಸಿ ಸಾಂಪ್ರದಾಯಿಕ ಕಟ್ಟಡ ನಿರ್ಮಾಣಕ್ಕೆ ತಗಲುವ ಸಮಯವನ್ನು ಉಳಿಸಬಹುದು.ಈ ಮಾದರಿಯ ಕಟ್ಟಡ ನಿರ್ಮಾಣದಿಂದ ಶೇ.25ರಿಂದ ಶೇ.30 ವೆಚ್ಚ ಕಡಿಮೆಯಾಗುತ್ತದೆ.
-ಫೈಜಲ್ ಇ 
ಕೆಇಎಫ್ ಇನ್ಫ್ರಾ ಸ್ಥಾಪಕ ಅಧ್ಯಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com