ಗದಗದಲ್ಲಿ ವಾಮಾಚಾರಕ್ಕೆ ಇಬ್ಬರು ಮಕ್ಕಳ ಬಲಿ ಶಂಕೆ

25 ದಿನ ಹಿಂದೆ ಮನೆ ಎದುರು ಆಟವಾಡುತ್ತಿದ್ದಾಗ ಕಣ್ಮರೆಯಾಗಿದ್ದ ಇಬ್ಬರು ಬಾಲಕರ ಶವಗಳು ಮಂಗಳವಾರ ಪತ್ತೆಯಾಗಿದ್ದು, ಅವರನ್ನು ವಾಮಾಚಾರಕ್ಕೆ ಬಳಸಿರುವ ಅನುಮಾನ ವ್ಯಕ್ತವಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವಲಗುಂದ: ತಾಲೂಕಿನ ಶಿರಕೋಳ ಗ್ರಾಮದಲ್ಲಿ 25 ದಿನ ಹಿಂದೆ ಮನೆ ಎದುರು ಆಟವಾಡುತ್ತಿದ್ದಾಗ ಕಣ್ಮರೆಯಾಗಿದ್ದ ಇಬ್ಬರು ಬಾಲಕರ ಶವಗಳು ಮಂಗಳವಾರ ಪತ್ತೆಯಾಗಿದ್ದು, ಅವರನ್ನು ವಾಮಾಚಾರಕ್ಕೆ ಬಳಸಿರುವ ಅನುಮಾನ ವ್ಯಕ್ತವಾಗಿದೆ.

ಗ್ರಾಮದ ವೀರಪ್ಪ ಬಸಪ್ಪ ಶಿರಸಂಗಿ - ಸುಜಾತಾ ದಂಪತಿ ಮಕ್ಕಳಾದ ನಾಗರಾಜ (13) ಹಾಗೂ ಆಕಾಶ (9) ಸೆ. 25ರಂದು ಮನೆ ಎದುರು ಆಟವಾಡುತ್ತಿದ್ದಾಗಲೇ ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ನವಲಗುಂದ ಪೊಲೀಸರ ಮೊರೆಹೋಗಿದ್ದರು. ಎಲ್ಲೆಡೆ ವಿಚಾರಿಸಿದರೂ ಪತ್ತೆಯಾಗದ ಕಾರಣ ಪೊಲೀಸರೂ ಕೈಚೆಲ್ಲಿದ್ದರು.

ಮಂಗಳವಾರ ಗ್ರಾಮದ ಸಮೀಪದ ತುಪರಿ ಹಳ್ಳದ ಮುಳ್ಳಿನ ಕಂಟಿಗೆ ಸಿಲುಕಿದ ಸ್ಥಿತಿಯಲ್ಲಿ ಈ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಇಬ್ಬರನ್ನೂ ಭೀಕರವಾಗಿ ಕೊಲೆ ಮಾಡಲಾಗಿದೆ. ಒಬ್ಬ ಬಾಲಕನ ಕುತ್ತಿಗೆ ಹಾಗೂ ಕೈ, ಮತ್ತೊಬ್ಬನ ಕೈ ಕೊಯ್ದು ಶವಗಳನ್ನು ಹಳ್ಳದಲ್ಲಿ ಬಿಸಾಕಿದ್ದಾರೆ. ಕಾಲಿನ ಭಾಗವೂ ದೇಹದಿಂದ ಬೇರ್ಪಟ್ಟಿತ್ತು. ಇದನ್ನು ಗಮನಿಸಿದಾಗ, ಮಕ್ಕಳನ್ನು ವಾಮಾಚಾರಕ್ಕೆ ಬಳಸಿರುವ ಶಂಕೆ
ವ್ಯಕ್ತವಾಗಿದ್ದು, ನವಲಗುಂದ ಠಾಣೆ ಪಿಎಸ್‍ಐ ಆನಂದ ಡೋಣಿ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com