ನರಗುಂದ: ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ರೈತ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 84ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ರೈತರಿಗೆ ಬೆಂಬಲ ಸೂಚಿಸಿರುವ ನಟ ಶರಣ್ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಕಳಸಾ ಬಂಡೂರಿ ಯೋಜನೆ ಅನುಷ್ಠಾನವಾಗುವವರೆಗೂ ರೈತರಿಗೆ ಬೆಂಬಲ ನೀಡುತ್ತೇನೆ ಎಂದರು. ಇದೇ ವೇಳೆ ನರಗುಂದ ರೈತರು ನಡೆಸುತ್ತಿರುವ ಹೋರಾಟ 102ನೇ ದಿನಕ್ಕೆ ಕಾಲಿಟ್ಟಿದೆ. ಈ ಧರಣಿಯಲ್ಲೂ ಭಾಗವಹಿಸಿದ ಶರಣ್, ನಾನೂ ಈ ಮಣ್ಣಿನ ಮಗ. ಈ ಮಣ್ಣಿನ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ನನಗೆ ರಾಜಕೀಯ ಗೊತ್ತಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ, ನಮಗೆ ಬೇಕಾದದ್ದು ನೀರು. ರೈತರ ಹೋರಾಟ ಈಗ 100 ದಿನ ತಲುಪಿದೆ. 200 ದಿನಗಳಾದರೂ ಚಿಂತೆಯಿಲ್ಲ. ನೀರು ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.