ರಾಘವೇಶ್ವರರಿಂದ ಯಾವುದೇ ಅಕ್ರಮ, ಅನಾಚಾರ ನಡೆದಿಲ್ಲ: ಮಠದ ಪ್ರಮುಖರಿಂದ ಸ್ಪಷ್ಟನೆ

ಮಠದ ಆಸ್ತಿಯನ್ನು ರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಸ್ವಂತಕ್ಕೆ ಎಂದಿಗೂ ಬಳಸಿಕೊಂಡಿಲ್ಲ.ಅಲ್ಲದೆ...
ರಾಘವೇಶ್ವರ ಶ್ರೀ
ರಾಘವೇಶ್ವರ ಶ್ರೀ

ಬೆಂಗಳೂರು: ಮಠದ ಆಸ್ತಿಯನ್ನು ರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಸ್ವಂತಕ್ಕೆ ಎಂದಿಗೂ ಬಳಸಿಕೊಂಡಿಲ್ಲ.ಅಲ್ಲದೆ, ಆಸ್ತಿ ಮಠದ ಹೆಸರಿನಲ್ಲೇ ಇದೆ. ಆಡಳಿತ ಪಾರದರ್ಶಕವಾಗಿದ್ದು, ಮಠದ ಅಂಗಸಂಸ್ಛೆಗಳು ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ರಾಮಕಥಾ ಸಂಚಾಲಕ ಗಜಾನನ ಶರ್ಮ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ರಾಘವೇಶ್ವರ ಸ್ವಾಮಿಗಳ ಮೇಲಿನ ಅತ್ಯಾಚಾರ ತನಿಖೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಂ.ಎನ್. ಭಟ್ ಅಂಥವರು ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೆ.ಅವರಿಗೆ ವಾಸ್ತವ ಅರ್ಥವಾಗುತ್ತಿಲ್ಲ ಎಂದರು.

ಶ್ರೀಗಳು ಏಕಾಂತದಲ್ಲಿ ಎಂದಿಗೂ ಉಪದೇಶ ನೀಡುತ್ತಿರಲಿಲ್ಲ, ರಾಮಕಥೆ ಬಗ್ಗೆ ಏಕಾಂತ ಸಭೆ ನಡೆದಿಲ್ಲ. ಏಕಾಂತದಲ್ಲಿ ಯಾರನ್ನೂ ಕರೆಯುತ್ತಿರಲಿಲ್ಲ ಎಂದರು. ಸಿಎಚ್‍ಎಸ್ ಭಟ್ ಮನೆಯಲ್ಲಿ ಪ್ರೇಮಲತಾ ಮೇಲೆ ಲೈಂಗಿಕ ಅತ್ಯಾಚಾರ ನಡೆದಿದೆ ಎನ್ನಲಾದ ಆರೋಪದ  ಕುರಿತು `ಹೀಗೆ ಆಗಲು ಸಾಧ್ಯವಿಲ್ಲ' ಎಂದು ಸಿಐಡಿ ತನಿಖೆ ವೇಳೆ ಎಂ.ಎನ್. ಭಟ್ ಹೇಳಿಕೆ ನೀಡಿದ್ದರು. ಆದರೆ, ಈಗ ಅದೇ ಎಂ.ಎನ್. ಭಟ್  ಹಲವು ವರ್ಷಗಳಿಂದ ಶ್ರೀಗಳ ವರ್ತನೆ ಬದಲಾಗಿತ್ತು. ಮಠಕ್ಕೆ ಹೆಂಗಸರನ್ನು ಏಕಾಂಗಿಯಾಗಿ ಬರುವಂತೆ ಸೂಚಿಸುತ್ತಿದ್ದರು. ಮಂತ್ರಾಕ್ಷತೆ ಕೊಡುವಾಗ ಹೆಂಗಸರನ್ನು ಮಾತ್ರ ಒಳಗೆ ಕರೆಯುತ್ತಿದ್ದರು.ಅಲ್ಲದೆ ಹೆಂಗಸರಿಂದ ಹಾಡು ಹೇಳಿಸುವುದರ ಜತೆಗೆ ನೃತ್ಯ ಮಾಡಿಸುತ್ತಿದ್ದರು'' ಎಂದು ಹೇಳಿಕೆ ನೀಡಿದ್ದಾರೆ. ಸಿಐಡಿ ಹೇಳಿಕೆ ಮತ್ತು ಈ ಹೇಳಿಕೆಯಲ್ಲಿ ತುಂಬಾ ವ್ಯತ್ಯಾಸವಿದೆ ಎಂದರು.

ಹೇಳಿಕೆ ತಿರುಚಲಾಗಿದೆ: ಪ್ರಕರಣ ಕುರಿತಂತೆ ನ್ಯಾಯಾಲಯ ನೀಡುವ ತೀರ್ಪನ್ನು ಸ್ವಿಕರಿಸಲು ನಾವು ಸಿದ್ಧರಿದ್ದೇವೆ. ಆದರೆ, ಅದರ ಮಧ್ಯೆ ನಮ್ಮ ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ. ಶ್ರೀಗಳು ಹಿಮಾಲಯಕ್ಕೆ ಹೋಗಿ ತಪಸ್ಸಿಗೆ ಕೂರುತ್ತೇನೆ ಎಂದು ಹೇಳಿರುವುದು ಸತ್ಯ. ಆದರೆ, ಈಗಲೇ ಹೋಗುತ್ತೇನೆ ಎಂದು ಎಂದಿಗೂ ಹೇಳಿಲ್ಲ. ಸಂತ, ಸನ್ಯಾಸಿಗೆ ಗಂಗಾನದಿ,ಹಿಮಾಲಯಕ್ಕೆ ಹೋಗುವ ಮನಸ್ಥಿತಿ ಇದ್ದೇ ಇರುತ್ತದೆ. ಜನರು ಅಗತ್ಯಕ್ಕೆ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com