ನನ್ನ ವಿರುದ್ಧದ ದೂರು ಆಧಾರ ರಹಿತ: ಮೇಯರ್ ಮಂಜುನಾಥ್ ರೆಡ್ಡಿ

ತಮ್ಮ ವಿರುದ್ಧ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ನೀಡಿರುವ ದೂರು ಆಧಾರ ರಹಿತ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ...
ಮಂಜುನಾಥ್ ರೆಡ್ಡಿ
ಮಂಜುನಾಥ್ ರೆಡ್ಡಿ

ಬೆಂಗಳೂರು: ತಮ್ಮ ವಿರುದ್ಧ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ನೀಡಿರುವ ದೂರು ಆಧಾರ ರಹಿತ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಮಂಜುನಾಥ್ ರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.

ಈ ಸಂಬಂಧ ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ್ ರೆಡ್ಡಿ, ನಾನು ಇದುವರೆಗೆ ನಾಲ್ಕು ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಚುನಾವಣಾ ಆಯೋಗ ತಿಳಿಸದಂತೆಯೇ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ಒಂದು ವೇಳೆ ದಾಖಲೆ ತಪ್ಪೆಂದು ಸಾಭೀತಾದರೆ ರಾಜಿನಾಮೆ ಸಲ್ಲಿಸುವುದಾಗಿ ಸವಾಲು ಹಾಕಿದರು.

ನನ್ನ ತೇಜೋವಧೆ ಮಾಡಲು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಂಜುನಾಥ್ ರೆಡ್ಡಿ, ವಕೀಲರ ಸಲಹೆ ಪಡೆದು ದೂರುದಾರರ ವಿರುದ್ಧ ಕೇಸ್ ದಾಖಲಿಸುವುದಾಗಿ ಮೇಯರ್ ತಿಳಿಸಿದರು.

ಬಿಬಿಎಂಪಿ ಚುನಾವಣೆಗೆ ಮೇಯರ್ ಮಂಜುನಾಥ ರೆಡ್ಡಿ ಸಲ್ಲಿಸಿರುವ ಅಸ್ತಿ ವಿವರ ಘೋಷಣೆ ದೋಷದಿಂದ ಕೂಡಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅಡ್ವೊಕೇಟ್ ಎನ್.ಪಿ ಅಮೃತೇಶ್ ದೂರು ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ನೋಟರಿ ರಿಜಿಸ್ಟಾರ್ ಸಂಖ್ಯೆಯನ್ನು ಉಲ್ಲೇಖಿಸಿಲ್ಲ. ಇದರಿಂದ ಜನಪ್ರತಿನಿಧಿ ಕಾಯ್ದೆ-1951 ರ 125 (ಎ) ಉಲ್ಲಂಘನೆಯಾಗಿದ್ದು, ಆ ಸಂದರ್ಭದಲ್ಲೇ ನಾಮಪತ್ರ ತಿರಸ್ಕೃತವಾಗ ಬೇಕಿತ್ತು. ನಾಮಪತ್ರದಲ್ಲಿ ಈ ಎರಡು ವಿಷಯಗಳ ಕುರಿತು ಮಾಹಿತಿ ನೀಡದೆ ಕಾನೂನು ಉಲ್ಲಂಘಿಸಲಾಗಿದೆ ಎಂದು ಅಮೃತೇಶ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com