ಮೈಸೂರಿನ ಚಾಮುಂಡಿ ಬೆಟ್ಟದ ಭಕ್ತರಿಗೆ ವಸ್ತ್ರಸಂಹಿತೆ !

ನಾಡಿನ ಧಾರ್ಮಿಕ ಹಾಗೂ ಶಕ್ತಿ ಕೇಂದ್ರ ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ...
ಮೈಸೂರಿನ ಚಾಮುಂಡೇಶ್ನರಿ ದೇವಾಲಯ
ಮೈಸೂರಿನ ಚಾಮುಂಡೇಶ್ನರಿ ದೇವಾಲಯ

ಮೈಸೂರು: ಧಾರ್ಮಿಕ ಕ್ಷೇತ್ರದ ಘನತೆ, ಗಂಭೀರತೆಗೆ ತಕ್ಕಂತ ಉಡುಗೆ ತೊಡುಗೆಗಳನ್ನು ಧರಿಸುವಂತೆ ಈಗಾಗಲೇ ದೇಶದ ಹಲವು ದೇವಾಲಯಗಳಲ್ಲಿ ಬರುವ ಪ್ರವಾಸಿಗರಿಗೆ, ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಡಿನ ಧಾರ್ಮಿಕ ಹಾಗೂ ಶಕ್ತಿ ಕೇಂದ್ರ ಚಾಮುಂಡಿ ಬೆಟ್ಟದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಈಗಾಗಲೇ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಹಾಗೂ ಕೊಡಗಿನ ತಲಕಾವೇರಿ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಪ್ರವಾಸಿಗರು, ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಇಂದಿನ ಯುವ ಸಮುದಾಯ ಹಾಗೂ ಕೆಲ ಮಂದಿ ಧರಿಸುವ ತುಂಡು ಚಡ್ಡಿ, ಹಾಫ್ ಪ್ಯಾಂಟ್, ಸ್ಲೀವ್ ಲೆಸ್ ಬನಿಯನ್, ಟೀ ಶರ್ಟ್ ಇನ್ನಿತರ ವಸ್ತ್ರಗಳನ್ನು ಧರಿಸಿ ಬರುವುದರಿಂದ ಇತರರಿಗೂ ಮುಜುಗರ ಉಂಟಾಗುತ್ತದೆ. ಹೀಗಾಗಿ ರೀತಿಯ ವಸ್ತ್ರಗಳನ್ನು ದೇವಸ್ಥಾನಕ್ಕೆ ಹಾಕಿಕೊಂಡು ಬರದಂತೆ ಅಕ್ಟೋಬರ್ 30 ರಿಂದ ಈ ವಸ್ತ್ರ ಸಂಹಿತೆ ಜಾರಿಗೆ ತರಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.

ಮೊದಲಿಗೆ ಪುರುಷರಿಗೆ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದ್ದು, ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳಿಗೂ ಇದರ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಬಾಬು ಹೇಳಿದ್ದಾರೆ. ಸದ್ಯಕ್ಕೆ ಈ ವಸ್ತ್ರ ಸಂಹಿತೆ ಜಾರಿಗೊಳಿಸುತ್ತಿರುವುದರಿಂದ ಇಲ್ಲಿಗೆ ತಿಳಿಯದೆ ಬಂದವರಿಗೆ ಅನುಕೂಲವಾಗಲಿ ಎಂದು ಪಂಚೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಂತ ಹಂತವಾಗಿ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸುವಂತೆ ಕ್ರಮ ವಹಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com