ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಿರಿಯ ನಟ ಬಾಲಕೃಷ್ಣರ ಪುತ್ರರಾದಂತಹ ಗಣೇಶ್ ಹಾಗೂ ಶ್ರೀನಿವಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಷ್ಣು ಪ್ರತಿಷ್ಠಾನಕ್ಕೆ ಭೂಮಿ ನೀಡಲು ನಮ್ಮ ಆಕ್ಷೇಪವಿಲ್ಲ. ಆದರೆ ರಾಜ್ಯ ಸರ್ಕಾರ ಭೂಮಿಗೆ ಪರಿಹಾರ ನೀಡಿಲ್ಲ. ಕೇವಲ ಬಿಳಿ ಹಾಳೆ ಮೇಲೆ ನಮ್ಮಿಂದ ಒಪ್ಪಿಗೆ ರುಜು ಪಡೆದಿದ್ದಾರೆ. ಕಾನೂನಿನ ಪ್ರಕ್ರಿಯೆ ಪಾಲಿಸದೇ ಅನ್ಯಾಯ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.