ಯುಟಿ ಖಾದರ್
ಯುಟಿ ಖಾದರ್

ಹುಕ್ಕಾ ಬಾರ್, ಚೀಟಿ ತಂಬಾಕು ನಿಷೇಧ ಶೀಘ್ರ

ಗುಟ್ಕಾ ನಿಷೇಧದ ಪ್ರಾರಂಭಿಕ ಯಶಸ್ಸಿನಿಂದ ಉತ್ತೇಜಿತವಾಗಿರುವ ರಾಜ್ಯ ಸರ್ಕಾರ ಎಲ್ಲಾ ಮಾದರಿಯ ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಹಂತ ಹಂತವಾಗಿ ನಿಷೇಧಿಸಲು ಕ್ರಮ ರೂಪಿಸುತ್ತಿದೆ.

ಬೆಂಗಳೂರು: ಗುಟ್ಕಾ ನಿಷೇಧದ ಪ್ರಾರಂಭಿಕ ಯಶಸ್ಸಿನಿಂದ ಉತ್ತೇಜಿತವಾಗಿರುವ ರಾಜ್ಯ ಸರ್ಕಾರ ಎಲ್ಲಾ ಮಾದರಿಯ ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಹಂತ ಹಂತವಾಗಿ ನಿಷೇಧಿಸಲು ಕ್ರಮ ರೂಪಿಸುತ್ತಿದೆ.
ಆರೋಗ್ಯ ಸಚಿವ ಯುಟಿ ಖಾದರ್ ಖಾದರ್  ಈ ವಿಷಯ ತಿಳಿಸಿದ್ದಾರೆ. ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ, ವಿಶ್ವಆರೋಗ್ಯ ಸಂಸ್ಥೆ ಹಾಗೂ ಸೆಂಟರ್ ಫಾರ್ ಕಮ್ಯುನಿಕೇಶನ್ ಆಂಡ್ ಚೇಂಜ್(ಇಂಡಿಯಾ) ಸಂಸ್ಥೆಗಳು ಜಂಟಿಯಾಗಿ ಎಂಟು ರಾಜ್ಯಗಳಲ್ಲಿ ನಡೆಸಿದ್ದ ಗುಟ್ಕಾ ನಿಷೇಧ ನಂತರದ ಸಮೀಕ್ಷೆ ವರದಿ ಬಿಡುಗಡೆ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಹಲವಾರು ಟೀಕೆ ವಿರೋಧಗಳ ನಡುವೆ ಜಾರಿಯಾಗಿದ್ದ ಗುಟ್ಕಾ ನಿಷೇಧ ಕ್ರಮ ನಿರೀಕ್ಷಿತ ಫಲಿತಾಂಶ ಕೊಡುತ್ತಿದೆ. ಸಮೀಕ್ಷೆಯ ವರದಿಯ ಪ್ರಕಾರ, ಶೇ.64 ರಷ್ಟು ಬಳಕೆದಾರರು ಗುಟ್ಕಾ ಸೇವನೆ ಕೈಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ, ಸಮೀಕ್ಷೆಗೆ ಒಳಪಟ್ಟವರ ಪೈಕಿ ಗುಟ್ಕಾ ನಿಷೇಧಕ್ಕೆ ಶೇ.94 ರಷ್ಟು ಬೆಂಬಲ ವ್ಯಕ್ತವಾಗಿದ್ದರೆ, ಗುಟ್ಕಾ ಸಹಿತ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳನ್ನು ಸರ್ಕಾರ ನಿಷೇಧಿಸಬೇಕೆಂದು ಶೇ.85 ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ ಎಂದರು.
ಹುಕ್ಕಾಬಾರ್ ಗೂ ನಿಷೇಧ: ಇತ್ತೀಚಿಗೆ ಸುದ್ದಿ ಮಾಡಿದ್ದ ಹುಕ್ಕಾ ಬಾರ್ ಅನುಮತಿ ವಿಷಯವನ್ನು ಪ್ರಸ್ತಾಪಿಸಿದ ಸಚಿವ ಖಾದರ್, ಇದು ಯುವ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೆಸರಿಗೆ ಹುಕ್ಕಾ ಅದರಲ್ಲಿ ಏನೇನು ಸೇರಿಸಿರುತ್ತಾರೋ ಏನೋ. ಯುವಜನತೆ ಗುಂಪುಗುಂಪಾಗಿ ಎಲ್ಲೆಂದರಲ್ಲಿ ಇದರ ಸೇವನೆ ಮಾಡುತ್ತಿದ್ದಾರೆ. 
ಕಾನೂನು ಇಲಾಖೆ ಹಾಗೂ ತತ್ಸಂಬಂಧಿ ಇಲಾಖೆ ಜೊತೆ ನಿಕಟ ಸಂಪರ್ಕದಲ್ಲಿದ್ದು ಶೀಘ್ರವೇ ಹುಕ್ಕಾ ಬಾರ್ ನಿಷೇಧಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com