ನೀರಿನ ಅನಧಿಕೃತ ಸಂಪರ್ಕ ಪಡೆದುಕೊಂಡೀರಿ ಜೋಕೆ!

ನಗರದ ನಿವಾಸಿಗಳೇ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರಿ ಜೋಕೆ! ಹೌದು... ಇಂತಹ ಖಡಕ್ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ನೀಡಿದ್ದಾರೆ.
ಅನಧಿಕೃತ ನೀರಿನ ಸಂಪರ್ಕ(ಸಾಂಕೇತಿಕ ಚಿತ್ರ)
ಅನಧಿಕೃತ ನೀರಿನ ಸಂಪರ್ಕ(ಸಾಂಕೇತಿಕ ಚಿತ್ರ)

ಬೆಂಗಳೂರು: ನಗರದ ನಿವಾಸಿಗಳೇ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರಿ ಜೋಕೆ!
ಹೌದು... ಇಂತಹ ಖಡಕ್ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ನೀಡಿದ್ದಾರೆ. ಅನಧಿಕೃತ ಸಂಪರ್ಕ ಪಡೆದವರಿಗೆ ದಂಡ, ದುಪ್ಪಟ್ಟು ಶುಲ್ಕ ವಿಧಿಸಲು ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಅಧಿಕೃತ ಸಂಪರ್ಕದ ಜೊತೆಗೆ ಮತ್ತೊಂದು ಅನಧಿಕೃತ ಬೈಪಾಸ್ ಸಂಪರ್ಕ ಹೊಂದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಈ ನಿರ್ಧಾರ ಕೈಗೊಂಡರು. ಅಲ್ಲದೇ ಇದೇ ನೀತಿಯನ್ನು ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಮಮೂರ್ತಿನಗರ ಸೇವಾಠಾಣೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದರು. ಸುಬ್ರಮಣ್ಯಪುರ ಬಡಾವಣೆಯಲ್ಲಿ ಅನಧಿಕೃತ ಸಂಪರ್ಕಗಳ ವಿಷಯ ತಿಳಿದು, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಮಳೆ ನೀರು ಕೊಯ್ಲು ಅಳವಡಿಕೆ ಮಾಡದ, ಗೃಹ ಬಳಕೆ ಕಟ್ಟಡವನ್ನು ಅನ್ಯ ಬಳಕೆಗೆ ಬದಲಾವಣೆ ಮಾಡಿಕೊಂಡ ಪ್ರಕರಣವನ್ನು ಅವರು ಪತ್ತೆ ಹಚ್ಚಿದರು. ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.
ಮನೆಯ ಆರ್.ಆರ್ ಸಂಖ್ಯೆ, ಕೆಇಬಿ ಸಂಖ್ಯೆ, ಗೃಹ ಬಳಕೆಯೇ, ಅನ್ಯ ಬಳಕೆಯೇ, ಕಟ್ಟಡ ಅಂತಸ್ತು, ನೀರಿನ ಬಳಕೆ ಪ್ರಮಾಣ, ಮಾಹಿತಿಯನ್ನು ಮನೆಯ ಭಾವಚಿತ್ರದೊಂದಿಗೆ ಸಂಗ್ರಹಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com