‘ಈ ಹೊತ್ತಿಗೆ’ಯು ಇದೇ ನವೆಂಬರ್ ೨೧ ಮತ್ತು ೨೨ರಂದು (ಶನಿವಾರ ಮತ್ತು ಭಾನುವಾರ), ಖ್ಯಾತ ಸಾಹಿತಿ ಎಸ್.ದಿವಾಕರ್ ಅವರ ನಿರ್ದೇಶನದಲ್ಲಿ ‘ಸಾಹಿತ್ಯ ವಿಮರ್ಶಾ ಕಮ್ಮಟ’ವನ್ನು ಏರ್ಪಡಿಸಿ, ಅದರಲ್ಲಿ ಭಾಗವಹಿಸಲು ರಾಜ್ಯಾದ್ಯಂತ ಆಸಕ್ತ ಓದುಗರು ಮತ್ತು ಬರಹಗಾರರನ್ನು ಆಹ್ವಾನಿಸುತ್ತಿದೆ. ಆಸಕ್ತರು ದಿನಾಂಕ ೧೦-೧೧-೨೦೧೫ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಸಾಹಿತ್ಯ ವಿಮರ್ಶೆ - ಏನು? ಯಾಕೆ?, ವಿಮರ್ಶೆಯ ಆಯಾಮಗಳು, ಸಹೃದಯ, ನವ್ಯ, ಬಂಡಾಯ, ಸ್ತ್ರೀವಾದಿ, ಆಧುನಿಕೋತ್ತರ, ರೂಪ ನಿಷ್ಠ ಮತ್ತು ಮನೋವಿಶ್ಲೇಷಣಾ ವಿಮರ್ಶೆಗಳು ಕಮ್ಮಟದ ವಿಷಯಗಳಾಗಿರುತ್ತವೆ.
ನಮ್ಮ ನಾಡಿನ ಖ್ಯಾತ ವಿಮರ್ಶಕರುಗಳಾದ ಎಸ್ ದಿವಾಕರ್, ಸಿ.ಎನ್ ರಾಮಚಂದ್ರನ್, ಓ.ಎಲ್ ನಾಗಭೂಷಣಸ್ವಾಮಿ, ಬಸವರಾಜ ಕಲ್ಗುಡಿ, ಬಿ,ಎನ್ ಸುಮಿತ್ರಾಬಾಯಿ, ಎಸ್.ಆರ್ ವಿಜಯಶಂಕರ್, ಕೆ.ವೈ ನಾರಾಯಣಸ್ವಾಮಿ ಮತ್ತು ಜಿ.ಬಿ ಹರೀಶ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಮ್ಮಟವನ್ನು ನಡೆಸಿಕೊಡಲಿದ್ದಾರೆ.
ಎರಡು ದಿನದ ಈ ಕಮ್ಮಟದಲ್ಲಿ ಭಾಗವಹಿಸಲು ಐದು ನೂರು ರೂಪಾಯಿಗಳ (ರೂ. ೫೦೦/-) ಪ್ರವೇಶಶುಲ್ಕವನ್ನು ನಿಗದಿಪಡಿಸಲಾಗಿದೆ. ಪರ ಊರಿನಿಂದ ಬರಲಿಚ್ಛಿಸುವ ಅಭ್ಯರ್ಥಿಗಳು ತಾವು ಬಂದು ಹೋಗುವ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳಬೇಕು.
ಬೆಳಿಗ್ಗೆ ೧೦.೦೦ರಿಂದ ಸಂಜೆ ೫.೩೦ರವರೆಗೆ ನಡೆಯುವ ಈ ಕಮ್ಮಟದಲ್ಲಿ ಎರಡೂ ದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಕಮ್ಮಟ ನಡೆವ ಸ್ಥಳ: – ಕಪ್ಪಣ್ಣ ಅಂಗಳ, ೧೪೮/೧, ೩೨, ಎ ಮುಖ್ಯರಸ್ತೆ, ಜೆ.ಪಿ.ನಗರ, ಮೊದಲ ಹಂತ, ಬೆಂಗಳೂರು – ೫೬೦೦೭೮.
ಆಸಕ್ತರು ದಿನಾಂಕ ೧೦-೧೧-೨೦೧೫ರ ಒಳಗಾಗಿ ತಮ್ಮ ಹೆಸರು, ವಿಳಾಸ, ಫೋನ್ ನಂಬರ್ ಮತ್ತು ಇ ಮೇಲ್ ಐಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಇಲ್ಲವೆ ಇ ಮೇಲ್ ಐಡಿಗೆ ಕಳುಹಿಸಿ ನೊಂದಾಯಿಸಿಕೊಳ್ಳಬಹುದು.
ವಿವರಗಳನ್ನು ಕಳುಹಿಸಬೇಕಾದ ವಿಳಾಸ:
‘ಈ ಹೊತ್ತಿಗೆ’, #೬೫, ‘ಮುಗುಳ್ನಗೆ’, 3rd A ಅಡ್ಡರಸ್ತೆ, ಪಿ.ಎನ್.ಬಿ.ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು -೫೬೦೦೬೨.