ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿಯಿಂದ ರೋಗಿಗೆ ಲೈಂಗಿಕ ಕಿರುಕುಳ

ಡೆಂಘೀ ಚಿಕಿತ್ಸೆಗೆಂದು ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶುಶ್ರೂಷಕ...
ಫೋರ್ಟಿಸ್ ಆಸ್ಪತ್ರೆ, ಚಿತ್ರ- ನಾಗೇಶ್ ಪೊಳಲಿ
ಫೋರ್ಟಿಸ್ ಆಸ್ಪತ್ರೆ, ಚಿತ್ರ- ನಾಗೇಶ್ ಪೊಳಲಿ

ಬೆಂಗಳೂರು: ಡೆಂಘೀ ಚಿಕಿತ್ಸೆಗೆಂದು ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶುಶ್ರೂಷಕ ಶಿವಕುಮಾರ್ ಎಂಬಾತನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 5ರಂದು ಈ ಘಟನೆ ನಡೆದಿದ್ದು, ಘಟನೆ ನಡೆದ ಮಾರನೇ ದಿನವೇ ಪೊಲೀಸರು ಆರೋಪಿ, ಕಮ್ಮನಹಳ್ಳಿ ನಿವಾಸಿ ಶಿವಕುಮಾರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು.

ವಿಚಾರಣೆ ವೇಳೆ ಆರೋಪಿ ಶಿವಕುಮಾರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

54 ವರ್ಷದ ಮಹಿಳೆಗೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದರಿಂದ ಅಕ್ಟೋಬರ್ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ 12ಗಂಟೆ ಸುಮಾರಿಗೆ ಆರೋಪಿ ಶಿವಕುಮಾರ್ ರೋಗಿಯ ಕೊಠಡಿಗೆ ತೆರಳಿ ಆರೋಗ್ಯ ಪರಿಶೀಲನೆ ನೆಪದಲ್ಲಿ ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ, ತನ್ನ ಪುತ್ರನಿಗೆ ವಿಷಯ ತಿಳಿಸಿದ್ದಾರೆ. ಆತ ತನ್ನ ತಂದೆಗೆ ಘಟನೆ ಬಗ್ಗೆ ವಿವರಿಸಿದ್ದಾರೆ.

ನಂತರ ಮಹಿಳೆ ಪುತ್ರ ಹಾಗೂ ಪತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com