ಅಲ್ಲದೇ, 7 ದಿನಕ್ಕೂ ಹೆಚ್ಚಿನ ದಿನ ಆಚರಿಸುವಂತಿದ್ದರೆ, ಸಾರ್ವಜನಿಕ ಮೈದಾನಗಳಲ್ಲಿ ಆಯೋಜಿಸಬಹುದು ಎಂದು ಹೇಳಲಾಗಿತ್ತು. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದರು. ಉತ್ಸವ ಸೀಮಿತಗೊಳಿಸುವ ಹಿಂದೆ ಇಲಾಖೆಗೆ ಬೇರೆ ಉದ್ದೇಶವಿರಲಿಲ್ಲ.ಸ್ಥಳೀಯ ಪೊಲೀಸರಿಂದ ಅನುಮತಿ ಪಡೆದು ರಾಜ್ಯೋತ್ಸವ ಆಚರಿಸಲು ಇಲಾಖೆಯ ಸಹಮತವಿ ದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.