
ಬೆಂಗಳೂರು: ಹೆಸರಘಟ್ಟ ಹೋಬಳಿಯಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಿಸುವುದಾಗಿ ಬಿಡಿಎ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡುವಂತೆ ಹೈಕೋರ್ಟ್ ಆದೇಶಿಸಿದೆ. ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆಂದು ಬಿಡಿಎ 2008ರ ಡಿ.30ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ನಿಗದಿತ ಸಮಯದಲ್ಲಿ ಅಂತಿಮ ಸೂಚನೆ ಹೊರಡಿಸಲು ಬಿಡಿಎ ವಿಫಲವಾಗಿದ್ದು, ಅಧಿಸೂಚನೆ ರದ್ದುಪಡಿಸ ಬೇಕು ಎಂದು ಕೋರಿ ಡಾ. ಕೆ.ಬಲರಾಮನ್ ಸೇರಿ 15 ಕ್ಕೂ ಹೆಚ್ಚು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಅರ್ಜಿದಾರರಿಗೆ ಸಂಬಂಧಿಸಿದ ಭೂಮಿ ಅಧಿಸೂಚನೆಯಿಂದ ರದ್ದುಪಡಿಸಿ ಆದೇಶಿಸಿದೆ. 2008ರಲ್ಲಿ ಬಿಡಿಎ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಿಸುವುದಾಗಿ 3,546 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
Advertisement