
ಮೈಸೂರು: ಯದುವಂಶದ ಉತ್ತರಾಧಿಕಾ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ನಡೆದಂತಹ ಸಾಂಸ್ಕೃತಿಕ ಹಬ್ಬದ ನಂತರ ಮಾತನಾಡಿದ ಯದುವೀರ್, ನನಗೆ ರಾಜಕಾರಣಕ್ಕೆ ಬರುವ ಪ್ಲಾನ್ ಇದೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಬರೋ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತೇನೆ ಎಂದಿರುವ ಒಡೆಯರ್, ಸದ್ಯಕ್ಕೆ ದಸರಾ ಸಿದ್ಧತೆಯಲ್ಲಿ ರಾಜ ಕುಟುಂಬ ತೊಡಗಿಕೊಂಡಿದೆ. ಪೂಜಾ ಕಾರ್ಯಕ್ರಮಗಳ ಬಗ್ಗೆ ತಾಯಿ ಪ್ರಮೋದಾದೇವಿಯಿಂದ ಮಾರ್ಗದರ್ಶನ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಪರಂಪರೆಯಂತೆ ಅರಮನೆಯಲ್ಲಿ ದಸರಾ ಆಚರಣೆ ನಡೆಸಲಾಗುತ್ತೆ. ಇನ್ನು ಸಂಪ್ರದಾಯ ಉಳಿಸಲೆಂದು ಸಾಕಷ್ಟು ಕಲಿಯುತ್ತಿದ್ದೇನೆ. ರಾಜಮಾತೆ ಪ್ರಮೋದ ದೇವಿ ಮಾರ್ಗದರ್ಶನದ ಮೇರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Advertisement