ಬಕ್ರೀದ್ ಪ್ರಾಣಿಬಲಿ: ಸರ್ಕಾರಕ್ಕೆ ನೋಟಿಸ್

ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಹಸು, ಕರು ಮತ್ತು ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಿ, ಬಲಿ ಪಡೆಯುತ್ತಾರೆಂದು ಆರೋಪಿಸಿ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಹಸು, ಕರು ಮತ್ತು ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಿ, ಬಲಿ ಪಡೆಯುತ್ತಾರೆಂದು ಆರೋಪಿಸಿ ದಾಖಲಾಗಿದ್ದ ಅರ್ಜಿಗೆ ರಾಜ್ಯ ಸರ್ಕಾರ, ಬೆಂಗಳೂರು ಜಿಲ್ಲಾ„ಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕಾನೂನಿನ ಪ್ರಕಾರ, ಹಸು, ಕುರಿ, ಬಲಿ ಪಡೆಯಬಾರದು. ಎತ್ತು ಮತ್ತು ಕೋಣಗಳನ್ನ ಮಾತ್ರ ಬಲಿಪಡೆಯಬೇಕು ಆದರೆ, ಬಕ್ರಿದ್ ಹಬ್ಬದ ನೆಪದಲ್ಲಿ ಕಾನೂನುಬಾಹಿರವಾಗಿ ಪ್ರಾಣಿ ಬಲಿ ನೀಡುತ್ತಿದ್ದು, ಅದನ್ನು ತಡೆಹಿಡಿಯಬೇಕು ಎಂದು ದೆಹಲಿ ಮೂಲದ ಸರ್ಕಾರೇತರ ಸಂಸ್ಥೆಯಾದ ಗೋ ಜ್ಞಾನ್ ಫೌಂಡೇಶನ್  ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ
ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಸ್. ಕೆ.ಮುಖರ್ಜಿ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಉಳಿದ ಪ್ರತಿವಾದಿಗಳಾದ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com