
ಧಾರವಾಡ: ತೀವ್ರ ಕುತೂಹಲ ಕೆರಳಿಸಿರುವ ಡಾ. ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್.ಪಿ .ಡಿ.ಸಿ ರಾಜಪ್ಪ ಅವರ ನೇತೃತ್ವದ ತಂಡ ಶುಕ್ರವಾರ ಅವರ ಮನೆ ಎದುರಿಗಿನ ವಿಶ್ವ ಅಪಾರ್ಟ್ ಮೆಂಟ್ ನಿವಾಸಿಗಳಿಂದ ಮಾಹಿತಿ ಪಡೆದಿದ್ದಾರೆ. ಪಾತಕಿಗಳು ಕಲ್ಬುರ್ಗಿ ಅವರ ಚಲನವಲನಗಳನ್ನು ಗಮನಿಸಿದ್ದಾರೆಯೇ? ಎಷ್ಟು ದಿನಗಳಿಂದ ಕೊಲೆ ಮಾಡಲು ಸಂಚು ನಡೆದಿತ್ತು, 9 ನೇ ಕ್ರಾಸ್ ನಲ್ಲಿ ಅನುಮಾ ನಾಸ್ಪದವಾಗಿ ಯಾರಾದರೂ ತಿರುಗಾಡುತ್ತಿದ್ದರೆ? ಮುಂತಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅಪಾರ್ಟ್ ಮೆಂಟ್ ನಿವಾಸಿಗಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ.
ಹಿರೇಮಲ್ಲೂರು ಈಶ್ವರನ್ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡ್ಕರ್, ಅಂದು ಬೆಳಗ್ಗೆ 8.30ಕ್ಕೆ ಕಲಬುರ್ಗಿ ಅವರನ್ನು ಭೇಟಿ ಮಾಡಿ ಊರಿಗೆ ತೆರಳುವ ಯೋಜನೆ ಇತ್ತು. ಅಗರಂತೆ 8ಕ್ಕೆ ತಯರಾಗಿ ಪಕ್ಕದಲ್ಲೇ ಇದ್ದ ಕಲಬುರ್ಗಿ ಅವರ ಮನೆಗೆ ತೆರಳಲು ಪ್ಯಾಂಟ್ ಧರಿಸುವಾಗ ಪಟಾಕಿ ಸಿಡಿದ ಸದ್ದು ಎರಡು ಬಾರಿ ಕೇಳಿತು. ಆಗ ಏನಾಯಿತು ಎಂದು ಹೊರ ಹೋಗಿ ನೋಡಿದ ನನ್ನ ಪತ್ನಿ ಕೂಗಿಕೊಂಡಳು. ಕೂಡಲೇ ಸರ್ ಮನೆಗೆ ಹೋಗಿ ನೋಡಿದೆ, ಅಷ್ಟರಲ್ಲೇ ಅವರು ರಕ್ತದಲ್ಲಿ ಬಿದ್ದಿದ್ದರು. ಅವರ ಎದೆಬಡಿತ, ನಾಡಿ, ಮೂಗಿನ ಉಸಿರಾಟವನ್ನು ನಾನು ನೋಡಿದೆ. ಆದರೆ, ಯಾವುದೇ ರೀತಿಯ ಎದೆಬಡಿತ ಇರಲಿಲ್ಲ. ತಕ್ಷಣ ಕಾರಿನಲ್ಲಿ ಅವರನ್ನು ಹಾಕಿಕೊಂಡು ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ಸಿವಿಲ್ ಆಸ್ಪೆತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿದರು. ಅಲ್ಲಿಯವರೆಗೆ ಶೂಟೌಟ್ ಆಗಿದೆ ಎಂದು ನಂಬಲು ಸಾಧ್ಯವೇ ಇರಲಿಲ್ಲ. ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಪ್ರಾಣ ಹೋಗಿದೆ. ತಲೆಯಲ್ಲಿ ಎರಡು ಗುಂಡುಗಳು ಹೊಕ್ಕಿವೆ ಎಂದಾಗ ನನಗೆ ದಿಗ್ಭ್ರಮೆಯಾಯಿತು. ಈ ಮೊದಲು ಅವರಿಗೆ ಮೂಗು ಸೋರಿ ರಕ್ತ ಬಂದಿತ್ತು. ಅದರಂತೆ ಅಂದು ಹಾಗೆಯೇ ಆಗಿ ಬಿದ್ದಿರಬಹುದು ಎಂದು ನಾವು ತಿಳಿದಿದ್ದೆವು. ಆದರೆ, ಗುಂಡು ಹೊಕ್ಕು ರಕ್ತ ಸೋರುತ್ತಿರುವುದು ವೈದ್ಯರು ಹೇಳಿದ ಮೇಲೆಯೇ ನಮಗೆ ಗೊತ್ತಾಗಿದ್ದು ಎಂದರು.
Advertisement