ಗರುಡಾ ಮಾಲ್ ವಾಯ್ಸ್ ಆಫ್ ಬೆಂಗಳೂರು 8ನೇ ಆವೃತ್ತಿಗೆ ಚಾಲನೆ

ಗರುಡಾ ಮಾಲ್ ಆಯೋಜಿಸುತ್ತಿರುವ ವಾಯ್ಸ್ ಆಫ್ ಬೆಂಗಳೂರು ಸೀಸನ್-8 ಸೆಪ್ಟೆಂಬರ್ 6 2015ರಂದು ಆರಂಭವಾಯಿತು.
ವಾಯ್ಸ್ ಆಫ್ ಬೆಂಗಳೂರು 8ನೇ ಆವೃತ್ತಿಗೆ ಚಾಲನೆ
ವಾಯ್ಸ್ ಆಫ್ ಬೆಂಗಳೂರು 8ನೇ ಆವೃತ್ತಿಗೆ ಚಾಲನೆ

7, ಸೆಪ್ಟೆಂಬರ್, 2015: ಗರುಡಾ ಮಾಲ್ ಆಯೋಜಿಸುತ್ತಿರುವ ವಾಯ್ಸ್ ಆಫ್ ಬೆಂಗಳೂರು ಸೀಸನ್-8  ಸೆಪ್ಟೆಂಬರ್ 6 2015ರಂದು ಆರಂಭವಾಯಿತು. ಇದು ಬೆಂಗಳೂರು ಮತ್ತು ಕರ್ನಾಟಕದಲ್ಲಿಯೇ ಇದು ಅತಿ ದೊಡ್ಡ ಪ್ರತಿಭಾನ್ವೇಷಣಾ ಕಾರ್ಯಕ್ರಮವಾಗಿದ್ದು, ಗರುಡಾ ಮಾಲ್ ಕಳೆದ 8 ವರ್ಷಗಳಿಂದ ಸತತವಾಗಿ ಇದನ್ನು ನಡೆಸುತ್ತಾ ಬಂದಿದೆ.  ಸ್ಯಾಂಡಲ್‍ವುಡ್ ಪ್ರಸಿದ್ಧ ನಟ ಜಗ್ಗೇಶ್ ಹಾಗೂ ನಟಿ ಅಮೂಲ್ಯ ಗರುಡಾ ಮಾಲ್‍ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಪ್ರಮುಖ ಶಾಪಿಂಗ್ ಕೇಂದ್ರವಾಗಿರುವ ಗರುಡಾ ಮಾಲ್ ವಾಯ್ಸ್ ಆಫ್ ಬೆಂಗಳೂರು 8 ಪ್ರಾಯೋಜಿಸುತ್ತಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಉದ್ಘಾಟನೆ ವೇಳೆ ಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಹಿಂದಿನ ವರ್ಷ ವಾಯ್ಸ್ ಆಫ್ ಬೆಂಗಳೂರು ಆವೃತ್ತಿಯ ವಿಜೇತರು ಹಾಗೂ ಅಂತಿಮ ಹಂತದ ಸ್ಪರ್ಧಿಗಳು ಗಾಯನ ಪ್ರಸ್ತುತಪಡಿಸಿದರು. 

8 ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ನಟ ಜಗ್ಗೇಶ್, ಇಂತಹ ಕಾರ್ಯಕ್ರಮಗಳಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಕಳೆದ ಏಳು ವರ್ಷಗಳಿಂದ ಹಲವಾರು ಗಾಯಕರು ಚಲನ ಚಿತ್ರ ರಂಗದಲ್ಲಿ ವಿಶಿಷ್ಠ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಸಂಗೀತ ರಂಗದಲ್ಲಿ ಕಳೆದ 7 ವರ್ಷಗಳಿಂದ ವಾಯ್ಸ್ ಆಫ್ ಬೆಂಗಳೂರು ಸಂಚಲನ ಉಂಟು ಮಾಡಿದೆ. ಸುಪ್ರಿಯಾ ರಾಮಕೃಷ್ಣಯ್ಯ, ಸಂತೋಷ್ ವೆಂಕಿ, ದೀಪಕ್ ಹಾಗೂ ಇತರರು ವಾಯ್ಸ್ ಆಫ್ ಬೆಂಗಳೂರು ಮುಖಾಂತರ ತಮ್ಮ ವೃತ್ತಿ ಜೀವನ ಕಂಡುಕೊಂಡಿದ್ದಾರೆ.

ಈ ಬಾರಿಯ ಕಾರ್ಯಕ್ರಮಕ್ಕೂ ಅಭೂತಪೂರ್ವ ಪ್ರತಿಕ್ರಿಯೆ ದೊರೆತರೆ ಅದು ವಿಶೇಷವೇನಲ್ಲ. ಈ ಹಿಂದಿನ ಎಲ್ಲಾ ಅವೃತ್ತಿಗಳಲ್ಲಿಯೂ ಕಾರ್ಪೋರೇಟ್ ಕಂಪನಿಗಳು, ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು, ಟೆಕ್ಕಿಗಳು, ವಿದ್ಯಾರ್ಥಿಗಳು ಆಡಿಷನ್‍ಗಳಲ್ಲಿ ಭಾಗವಹಿಸಿದ್ದಾರೆ.

2007ರಲ್ಲಿ ಈ ಕಾರ್ಯಕ್ರಮದ ಕುರಿತು ಇದ್ದ ಕನಸು ಈಗ ಪ್ರತಿಷ್ಠಿತ ಕಾರ್ಯಕ್ರಮವಾಗಿ ಬೆಳೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಾಯ್ಸ್ ಆಫ್ ಬೆಂಗಳೂರು ಪ್ರತಿಭೆಗಳಾದ ಸುಪ್ರಿಯಾ ರಾಮಕೃಷ್ಣಯ್ಯ, ಸಂತೋಷ್ ಹಾಗೂ ದೀಪಕ್ ಇವರೆಲ್ಲಾ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.

ವಾಯ್ಸ್ ಆಫ್ ಬೆಂಗಳೂರು 8ರ ಆಡಿಷನ್ ಸೆ.8ರಿಂದ ಮಂಡ್ಯ, ಮೈಸೂರು, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ. ಪ್ರಮುಖ ಕಾರ್ಪೋರೇಟ್ ಕಂಪನಿಗಳಲ್ಲೂ ಆಡಿಷನ್ ನಡೆಸಲಾಗುತ್ತದೆ. ಗರುಡಾ ಮಾಲ್‍ನಲ್ಲಿ ಪ್ರತಿ ಶನಿವಾರ, ಭಾನುವಾರ ಆಡಿಷನ್ ಮಾಡಲಾಗುತ್ತದೆ.

ಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಇತರೆ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು ಗಾಯಕರನ್ನು ಆಯ್ಕೆ ಮಾಡುತ್ತಾರೆ.  2015  ನವೆಂಬರ್ 22ರಂದು ಅಂತಿಮ ಸ್ಪರ್ಧೆ ನಡೆಯುತ್ತದೆ.  ಓರ್ವ ಪುರುಷ ಹಾಗೂ ಓರ್ವ ಮಹಿಳಾ ವಿಜೇತರಿಗೆ ವಾಯ್ಸ್ ಆಫ್ ಬೆಂಗಳೂರು ಕಿರೀಟ ತೊಡಿಸಲಾಗುತ್ತದೆ ಹಾಗೂ ಒಂದು ಕಾರನ್ನು ಬಹುಮಾನವಾಗಿ ನೀಡಲಾಗುತ್ತದೆ.

ಸಂಪರ್ಕಿಸಿ
ಪ್ರೇರಣಾ-9900019249
ಗರುಡಾ ಮಾಲ್ ಬೆಂಗಳೂರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com