ಅನೈತಿಕ ಸಂಬಂಧಕ್ಕೆ ಮೂರು ಮಕ್ಕಳನ್ನೇ ಹತ್ಯೆಗೈದ ಭೂಪ!

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಮೂವರು ಮಕ್ಕಳನ್ನು ಅಮಾನವೀಯವಾಗಿ ಹತ್ಯೆಗೈದಿರುವ ದುರ್ಘಟನೆ ತಡವಾಗಿ ಬೆಳಕಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಮೂವರು ಮಕ್ಕಳನ್ನು ಅಮಾನವೀಯವಾಗಿ ಹತ್ಯೆಗೈದಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಎಚ್‍ಬಿಆರ್ ಲೇಔಟ್‍ನ ನಿರ್ಜನ ಪ್ರದೇಶದಲ್ಲಿದ್ದ ಮ್ಯಾನ್‍ಹೋಲ್‍ನಲ್ಲಿ ಹಾಕಿ ಮಕ್ಕಳನ್ನು ಕೊಲೆ ಮಾಡಲಾಗಿದ್ದು, ಒಂದು ಮಗುವಿನ ಶವ ಪತ್ತೆಯಾಗಿದ್ದು, ಇನ್ನೂ ಎರಡು ಮಕ್ಕಳ ಶವಗಳು ಪತ್ತೆಯಾಗಬೇಕಿದೆ.
ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನಿವಾಸಿಗಳಾದ ಒಂದೇ ಕುಟುಂಬದ ಹುಸ್ಮಾ ಬೇಗಂ (8), ಅಬ್ಬಾಸ್ ಬೇಗ್ (6) ಹಾಗೂ ರಹೀಂ ಬೇಗ್ (4) ದಾರುಣವಾಗಿ ಹತ್ಯೆಯಾಗಿರುವ ಮಕ್ಕಳು. ಕಳೆದ 12 ದಿನಗಳ ಹಿಂದೆ ಅನುಮಾನಸ್ಪದವಾಗಿ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿದ್ದು, ಸದ್ಯ ರಹೀಂ ಬೇಗ್ ಶವ ಪತ್ತೆಯಾಗಿದೆ. ಫಯೂಮ್  ಬೇಗ್(23) ಎಂಬಾತ ಮಕ್ಕಳನ್ನು ಮ್ಯಾನ್‍ಹೋಲ್‍ನಲ್ಲಿ ಹಾಕಿ ಕೊಲೆ ಮಾಡಿದ್ದಾನೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

 ಸದ್ಯ ರಹೀಂ ಶವ ಸಿಕ್ಕಿದ್ದು, ಇನ್ನಿಬ್ಬರು ಮಕ್ಕಳ ಶವ ಸಿಕ್ಕಿಲ್ಲ. ಹಾಗಾಗಿ ಮಕ್ಕಳ ದೇಹ ಪತ್ತೆಗೆ ಜಲಮಂಡಲಿ ಹಾಗೂ ಅಗ್ನಿಶಾಮಕಇಲಾಖೆ ಸಿಬ್ಬಂದಿಯಿಂದ ಶೋಧ ಕೊಲೆ ಮಾಡಿದ್ದು ಹೀಗೆ ಆರೋಪಿ ಮಕ್ಕಳಿಗೆ ಪರಿಚಿತವಾಗಿದ್ದರಿಂದ ಶಾಲೆಗೆ ಹೋಗಿ ಕರೆದಾಗ ಜತೆ ಹೋಗಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆತಂದು ಮ್ಯಾನ್‍ಹೋಲ್‍ಗೆ ಹಾಕಿದ್ದಾನೆ.ಇಬ್ಬರನ್ನು ಹಾಕಿ, ಅವರಿಬ್ಬರನ್ನು ಎತ್ತಿಕೊಂಡು ಬರುವಂತೆ ಮತ್ತೊಬ್ಬನನ್ನು ಹಾಕಿದ್ದಾನೆ. ಮೂವರು ಕೊಚ್ಚಿ ಹೋಗಿದ್ದಾರೆಯೇ ಎಂಬುದನ್ನು ಪರೀಕ್ಷಿಸಲು ಆತನೂ ಇಳಿದು ಪರಿಶೀಲಿಸಿದ್ದಾನೆ. ನಂತರ ಮನೆಗೆ ವಾಪಾಸಾಗಿದ್ದಾನೆ.


ಹಿನ್ನೆಲೆ: ಮಕ್ಕಳು ಲಿಂಗರಾಜಪುರದ ಸಿದ್ದಾರ್ಥ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆ. 27ರಂದು ಎಂದಿನಂತೆ ಶಾಲೆಗೆ ಹೋಗಿದ್ದರು. ತಾಯಿ ನಗೀನ ಬೇಗಂ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಮಕ್ಕಳನ್ನು ಶಾಲೆಗೆ ಬಿಟ್ಟು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಆಕೆ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆದರೆ, ಮಕ್ಕಳು ಸಂಜೆ ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ನಗೀನಾ ಬೇಗಂ ಶಾಲೆಯ ಬಳಿ ಹೋಗಿ ವಿಚಾರಿಸಿದ್ದಾರೆ. ಮಕ್ಕಳು ಶಾಲೆ ಬಿಟ್ಟ ನಂತರ ಮನೆಗೆ ತೆರಳಿದ್ದಾಗಿ ಶಾಲಾ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ನಗೀನಬೇಗಂ ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆದರೂ ಮಕ್ಕಳ
ಸುಳಿವು ಪತ್ತೆಯಾಗಿರಲಿಲ್ಲ.

ಪತಿಯ ಸಂಬಂಧಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿ ಫಯೂಂ ಎಂಬಾತ ನಗೀನಾಳ ಪತಿಯ ಸಂಬಂಧಿ ಪ್ರತಿನಿತ್ಯ ಆಕೆಯ ಮನೆಗೆ
ಬಂದು ಹೋಗುತ್ತಿದ್ದ. ಹಾಗಾಗಿ ಮಕ್ಕಳಿಗೂ ಆತನ ಪರಿಚಯವಿತ್ತು. ನಿತ್ಯ ಮನೆಗೆ ಬರುವಾಗ ಮಕ್ಕಳಿಗೆ ತಿಂಡಿ ತರುತ್ತಿದ್ದ. ಹಾಗಾಗಿ ಮಕ್ಕಳಿಗೆ ಆತನ ಪರಿಚಯ ಚೆನ್ನಾಗಿತ್ತು.
ನಗೀನಾ ಹಾಗೂ ಫಯೂಂಗೂ ಸಂಬಂಧವಿರುವ ವಿಷಯ ತಿಳಿದ ನಗೀನಾ ಪತಿ ಇಲಿಯಾಸ್ ಪತ್ನಿಯನ್ನು ತ್ಯಜಿಸಿಹೈದ್ರಾಬಾದ್‍ಗೆ ತೆರಳಿ ಪೇಂಟರ್ ಕೆಲಸ ಮಾಡುತ್ತಿದ್ದ.

ಅನೈತಿಕ ಸಂಬಂಧಕ್ಕೆ ಅಡ್ಡಿ: ಪತಿಯನ್ನು ತ್ಯಜಿಸಿದ್ದ ನಗೀನಾಗೆ ಮೂವರು ಮಕ್ಕಳಿದ್ದರು. ಆದರೆ, ಮಕ್ಕಳಿದ್ದ ಕಾರಣ ಅವರಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತಿತ್ತು. ಇದರಿಂದ
ಆಗಾಗ ಬೇಸರಗೊಳ್ಳುತ್ತಿದ್ದ ಫಯೂಂ, ಮಕ್ಕಳಿದ್ದಾರೆ ಮುಂದೆ ಏನಾದರೂ ತೊಂದರೆ ಆಗಬಹುದು ಎಂದು ಭಾವಿಸಿದ್ದ.ಹಾಗಾಗಿ ಆ.27 ರಂದು ಮೂವರು ಮಕ್ಕಳನ್ನು ಎಚ್‍ಬಿಆರ್
ಲೇಔಟ್‍ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಿಂದ ಸಂಬಂಧ ಬೆಳಕಿಗೆ: ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದರು. ಈ ಸಂಬಂಧ ಮಕ್ಕಳ ತಾಯಿ, ತಂದೆ
ಹಾಗೂ ಸಂಬಂ„ಕರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ನಗೀನಾ ಹಾಗೂ ಫಯೂಂಗೆ ಅನೈತಿಕ ಸಂಬಂಧ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಆಧಾರದ ಮೇಲೆ
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆನಡೆಸಿದಾಗ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com