
ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಾರ್ ಮಾಲೀಕನ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸುಪಾರಿಹಂತಕರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆಯ ಇಮ್ರಾನ್ (33), ಬೆಳ್ತಂಗಡಿಯ ಅನ್ವರ್‍ಹಸನ್ (32), ಸುರೇಶ್ (28) ಮತ್ತು ಆಂಧ್ರಪ್ರದೇಶದ ಸುಹೈಲ್‍ಖಾನ್ (26) ಬಂಧಿತರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ರಾಕೇಶ್, ದುಬೈ ಮೂಲದ ಅಸ್ಗರ್ ಆಲಿ ಎಂಬುವವರು ತಲೆಮರೆಸಿ ಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದ್ದಾರೆ.
ವ್ಯವಹಾರಿಕ ವೈಮನಸ್ಸು: ಹಣಕಾಸು ವ್ಯವಹಾರವೇ ಈ ಘಟನೆಗೆ ಕಾರಣ. ಟೈಮ್ಸ್ ಬಾರ್‍ನ ಮಾಲೀಕಚೇತನ್ ಹಾಗೂ ಆರೋಪಿ ರಾಕೇಶ್ ವ್ಯಾಪಾರದಲ್ಲಿ ಈ ಹಿಂದೆ ಇಬ್ಬರೂ
ಪಾಲುದಾರರಾಗಿದ್ದರು. ಈ ನಡುವೆ ವ್ಯಾಪಾರದಲ್ಲಿ ಆಗುತ್ತಿದ್ದ ನಷ್ಟಹಾಗೂ ಲಾಭದಿಂದ ಇಬ್ಬರ ನಡುವೆ ಮನಸ್ತಾಪವಾಗುತ್ತಿತ್ತು. ಇದರಿಂದಇಬ್ಬರೂ ವ್ಯವಹಾರಿಕ ಪಾಲುದಾರಿಕೆಯಿಂದ ದೂರವಾಗಿದ್ದರು. ಈ ನಡುವೆ ಚೇತನ್ ರೆಸಿಡೆನ್ಸಿ ರಸ್ತೆಯಲ್ಲಿ ಬಾರ್ ನಡೆಸುತ್ತಿದ್ದ. ರಾಕೇಶ್ ಸ್ನೇಹಿತರ ಜತೆ ದುಬೈ ಸೇರಿಕೊಂಡಿದ್ದ. ಚೇತನ್ ವ್ಯವಹಾರದಲ್ಲಿ
ದಿನದಿನಕ್ಕೆ ಹಣ ಸಂಪಾದನೆ ಮಾಡತೊಡಗಿ ದ. ಈ ಬಗ್ಗೆ ಮಾಹಿತಿ ಪಡೆದ ರಾಕೇಶ್ ಹಣಕ್ಕಾಗಿ ಪೀಡಿಸತೊಡಗಿ ದ್ದನು. ರಾಕೇಶ್ ದುಬೈನಲ್ಲಿ ದ್ದುಕೊಂಡು ಚೇತನ್‍ಗೆ ಪದೇ ಪದೇ ಕರೆ ಮಾಡಿ ಪ್ರತಿ ತಿಂಗಳು ರು. 15 ಲಕ್ಷ ಹಣ ನೀಡುವಂತೆ ಪೀಡಿಸುತ್ತಿದ್ದ, ಇದಕ್ಕೆ ಆತ ನಿರಾಕರಿಸಿದ್ದರಿಂದ ಆಗ ಕರೆ ಮಾಡಿ ಬೆದರಿಕೆ ಹಾಕಿದ್ದಎಂದು ತಿಳಿಸಿದರು.
ಕೊಲೆ ಸಂಚು, ಪರಾರಿ: ಚೇತನ್ ಹಣ ನೀಡಲು ನಿರಾಕರಿಸಿ ರಾಕೇಶ್ ಬೆದರಿಕೆಗೆ ಬಗ್ಗಲಿಲ್ಲ. ಹಾಗಾಗಿ ರಾಕೇಶ್ ದುಬೈ ಮೂಲದ ಅಸ್ಗರ್ ಎಂಬಾತನ ಜತೆ ಸೇರಿ ಬೆಳ್ತಂಗಡಿಯ ಅನ್ವರ್
ಹಸನ್‍ನನ್ನು ಸಂಪರ್ಕಿಸಿದ್ದ. ಆತನ ಜತೆ ಚೇತನ್ ಕೊಲೆ ಮಾಡುವ ಬಗ್ಗೆ ಚರ್ಚಿಸಿ ಹಣ ನೀಡುವುದಾಗಿ ತಿಳಿಸಿದ್ದ. ಆತನ ಸೂಚನೆಯಂತೆ ಅನ್ವರ್ ಹಸನ್ ಎಂಬಾತ ಅನ್ವರ್ ಇಮ್ರಾನ್ ಎಂಬಾತನನ್ನು ಸಂಪರ್ಕಿಸಿ 1.50 ಲಕ್ಷ ಮುಂಗಡ ಹಣ ನೀಡಿ, ರು. 15 ಲಕ್ಷಕ್ಕೆ ಸುಪಾರಿ ಕೊಲೆಗೆ ಒಪ್ಪಿಸಿದ್ದ. ಇಮ್ರಾನ್ ನ ಸಹಚರರಾದ ರಾಜು, ಸುಹೇಲ್‍ರನ್ನು ಬೆಂಗಳೂರಿಗೆ ಕರೆಸಿ ಅವರ ಮೂಲಕ ಬಾರ್‍ನ ಕೆಲಸಗಾರ ಸುರೇಶ್‍ನನ್ನು ಸಂಪರ್ಕಿಸಿದ್ದರು. ಆತನಿಂದ ಮಾಲೀಕ ಚೇತನ್‍ನ ಸಂಪೂರ್ಣ ಮಾಹಿತಿ ಹಾಗೂ ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದರು. ಸಂಚು ರೂಪಿಸಿದಂತೆ ಆ.16 ರಂದು ರಾತ್ರಿ ಆರೋಪಿಗಳು ಬಾರ್ ಬಳಿಗೆ ಬಂದು, ಚೇತನ್‍ಗಾಗಿ ಕಾಯುತ್ತಿದ್ದರು. ಅವರಲ್ಲಿ ಇಮ್ರಾನ್ ಹಾಗೂ ರಾಜು ಬಾರ್‍ನ ಹೊರಗೆನಿಂತಿದ್ದರು. ಆತ ಬಾರ್‍ನ ಹೊರಗೆ ಆಗಮಿಸುತ್ತಿದ್ದಂತೆ 2 ಸುತ್ತು ಗುಂಡು ಹಾರಿಸಿ, ಪರಾರಿಯಾಗಿದ್ದರು. ಪಬ್‍ನ ಒಳಗೆ ಹೋದ ಆರೋಪಿ ಸುಹೈಲ್, ಚೇತನ್ ಮೇಲೆ ಪಿಸ್ತೂಲ್‍ನಿಂದ ಎರಡು ಸುತ್ತುಗುಂಡು ಹಾರಿಸಿದ್ದ. ಒಂದು ಗುಂಡು ಚೇತನ್ ಬೆನ್ನಿನ ಎಡಕ್ಕೆ ಹೊಕ್ಕಿತ್ತು.
ಸಿಬ್ಬಂದಿ ನೀಡಿದ ಸುಳಿವು
ಘಟನೆ ಸಂಬಂಧ ಪಬ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಮಾಹಿತಿ ಕಲೆಹಾಕಿದರು. ನಂತರ ಸುರೇಶ್ ಮೇಲೆ ಅನುಮಾನ ಬಂದ ಕಾರಣ, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ. ಆ ಮಾಹಿತಿ ಆಧರಿಸಿ ಮೆಜೆಸ್ಟಿಕ್ ಬಳಿಯ ವಸತಿಗೃಹವೊಂದರಲ್ಲಿ ತಲೆಮರೆಸಿಕೊಂಡಿದ್ದ ಸುಹೈಲ್‍ನನ್ನು ಬಂಧಿಸಲಾಯಿತು. ಉಳಿದ ಆರೋಪಿಗಳನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಆಯುಕ್ತರು ಮಾಹಿತಿ ನೀಡಿದರು. ತಲೆಮರೆಸಿಕೊಂಡಿರುವ ರಾಕೇಶ್ ಮತ್ತು ಅಸ್ಗರ್ ಅಲಿ ಅವರ ವಿರುದ್ಧ ಬೆಂಗಳೂರಿನ ಹೆಬ್ಬಾಳ ಮತ್ತು ಮಂಗಳೂರು ಠಾಣೆಗಳಲ್ಲಿ ಬೆದರಿಕೆ, ಕೊಲೆ ಯತ್ನ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿವೆ. ರಾಕೇಶ್ ಮತ್ತು ಅಸ್ಗರ್‍ಗೆ ಶರಣಾಗುವಂತೆ ನೋಟಿಸ್ ಹೊರಡಿಸಲಾಗುವುದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಹೇಳಿದ್ದಾರೆ.
Advertisement