ಮುರಳೀಧರ, ನಂದಿನಿಗೆ ಶಕುಂತಲಾ ಪ್ರಶಸ್ತಿ

ಭರತನಾಟ್ಯದಲ್ಲಿ ಸಾಧನೆ ಮಾಡಿರುವ ಹಿರಿಯ ಕಲಾವಿದ ಮುರಳೀಧರ ರಾಯ್ ಹಾಗೂ ಕಥಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಂದಿನಿ.ಕೆ.ಮೆಹ್ತಾ ಅವರು ರಾಷ್ಟ್ರಮಟ್ಟದ `ಶಕುಂತಲಾ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ...
ಬೆಂಗಳೂರಿನ `ಹೂವು ಪ್ರತಿಷ್ಠಾನ' ನೀಡಲಿರುವ `ಶಕುಂತಲಾ ಪ್ರಶಸ್ತಿ' ಪ್ರಕಟಣೆ ಕುರಿತು ನಟಿ ಭಾವನಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಆಯ್ಕೆ ಸಮಿತಿ ಸದಸ್ಯ ಸುಬ್ರಹ್ಮಣ್ಯ ಇದ್ದರು.
ಬೆಂಗಳೂರಿನ `ಹೂವು ಪ್ರತಿಷ್ಠಾನ' ನೀಡಲಿರುವ `ಶಕುಂತಲಾ ಪ್ರಶಸ್ತಿ' ಪ್ರಕಟಣೆ ಕುರಿತು ನಟಿ ಭಾವನಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಆಯ್ಕೆ ಸಮಿತಿ ಸದಸ್ಯ ಸುಬ್ರಹ್ಮಣ್ಯ ಇದ್ದರು.
Updated on

ಬೆಂಗಳೂರು: ಭರತನಾಟ್ಯದಲ್ಲಿ ಸಾಧನೆ ಮಾಡಿರುವ ಹಿರಿಯ ಕಲಾವಿದ ಮುರಳೀಧರ ರಾಯ್ ಹಾಗೂ ಕಥಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಂದಿನಿ.ಕೆ.ಮೆಹ್ತಾ ಅವರು ರಾಷ್ಟ್ರಮಟ್ಟದ `ಶಕುಂತಲಾ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ನಶಿಸುತ್ತಿರುವ ಸಂಸ್ಕೃತಿ ಹಾಗೂ ಕಲೆಯನ್ನು ಪೋಷಿಸಿ, ಪ್ರೋತ್ಸಾಹಿಸಲು `ಹೂವು ಪ್ರತಿಷ್ಠಾನ'ವು ಪ್ರಸಕ್ತ ಸಾಲಿನಲ್ಲಿ ಈ ಇಬ್ಬರು ಉತ್ತಮ ಸಾಧಕರಿಗೆ `ಶಕುಂತಲಾ ಪ್ರಶಸ್ತಿ' ನೀಡಲಿದೆ ಎಂದು ನಟಿ ಹಾಗೂ ಬಾಲಭವನದ ಅಧ್ಯಕ್ಷ ಭಾವನಾ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಮ್ಮ ತಾಯಿ ಹೆಸರಿನಲ್ಲಿ ಈ ಪ್ರತಿಷ್ಠಾನ ಸ್ಥಾಪಿಸಲಾಗಿದ್ದು ಇದೇ 16ರಂದು `ಮಾತೃ ನಮನ'ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6ಕ್ಕೆ ಎಡಿಎ ರಂಗಮಂದಿರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದರು.

ಈ ಪ್ರಶಸ್ತಿ ಕೇವಲ ಕನ್ನಡಿಗರಿಗೆ ಸೀಮಿತವಾಗಿಲ್ಲ, ಹೊರರಾಜ್ಯದವರಿಗೂ ನೀಡಲಾಗುವುದು. ಪ್ರಶಸ್ತಿಗೆ ವಯಸ್ಸಿನ ಅಂತರವಿಲ್ಲ. ಆದರೆ, ಈ ಬಾರಿ ಪ್ರಥಮವಾಗಿ ಇಬ್ಬರು ಕನ್ನಡಿಗರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕಲಾ ಪ್ರಕಾರಗಳ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಆ ಸಮಿತಿ ಕಲಾವಿದರನ್ನು ಆಯ್ಕೆ ಮಾಡಿದೆ. ಸಮಿತಿಯನ್ನು ಕಾಲ ಕಾಲಕ್ಕೆ ಬದಲಾಯಿಸಲಾಗುವುದು ಎಂದರು.

ಪ್ರತಿವರ್ಷ ಬಹುಮಾನ:

ಹಿರಿಯ ಸಾಧಕರಿಗೆ ರು. 5ಲಕ್ಷ ಹಾಗೂ ಕಿರಿಯ ಸಾಧಕರಿಗೆ ರು.1.5 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಥಕ್ ನೃತ್ಯ ಕಲಾವಿದ ವಿಶಾಲ್ ಕೃಷ್ಣ, ತಬಲ ವಾದಕ ಅರವಿಂದ್ ಕುಮಾರ್ ಆಜಾದ್, ಕೊಳಲು ವಾದಕ ರೋಹಿತ್ ವಾಂಕರ್, ಸಾರಂಗಿ ವಾದಕ ಸಂದೀಪ್ ಮಿಶ್ರಾ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಕುಂತಲಾ ಪ್ರಶಸ್ತಿ ಸಲಹೆಗಾರ ಸಮಿತಿ ಸದಸ್ಯ ಸತ್ಯನಾರಾಯಣ, ಆಯ್ಕೆ ಸಮಿತಿ ಸದಸ್ಯ ಸುಬ್ರಮ್ಮಣ್ಯ ಇದ್ದರು.

ಪ್ರತಿಷ್ಠಾನದಿಂದ ರು.1 ಕೋಟಿ ವೆಚ್ಚ

ಅನಾಥಾಶ್ರಮ ಸೇರಿದಂತೆ ಮಕ್ಕಳಿಗೆ ಇಂತಹ ಕಲೆಗಳನ್ನು ಪರಿಚಯಿಸಲು ಪ್ರತಿ ವರ್ಷ ಪ್ರತಿಷ್ಠಾನ ರು.1 ಕೋಟಿ ವೆಚ್ಚ ಮಾಡಲಿದೆ. ಅದಕ್ಕಾಗಿ ಶಿಕ್ಷಕರನ್ನು ನೇಮಿಸಲಾಗುವುದು.
ಪ್ರತಿಷ್ಠಾನವೇ ಅಗತ್ಯ ವಾದ್ಯ ಹಾಗೂ ಪರಿಕರ ನೀಡಲಿದೆ. ಅಥವಾ ಆಸಕ್ತ ಶಿಕ್ಷಕರು ಇಂತಹ ಅನಾಥ ಮಕ್ಕಳಿಗೆ ಶಾಲೆಗಳಲ್ಲಿ ಮಕ್ಕಳಿಗೆ ಕಲೆ ಬಗ್ಗೆ ತರಬೇತಿ ನೀಡುವುದಾದಲ್ಲಿ ಅವರಿಗೆ
ಗೌರವ ಧನ ನೀಡಲಾಗುವುದು. ಆಸಕ್ತ ಕಲಾ ಶಿಕ್ಷಕರು 96630 09922 ಸಂಪರ್ಕಿಸಬಹುದು ಎಂದು ಭಾವನಾ ತಿಳಿಸಿದರು.

ಅನಾಥಾಶ್ರಮ ಸೇರಿದಂತೆ ಮಕ್ಕಳಿಗೆ ಇಂತಹ ಕಲೆಗಳನ್ನು ಪರಿಚಯಿಸಲು ಪ್ರತಿ ವರ್ಷ ಪ್ರತಿಷ್ಠಾನ ರು.1 ಕೋಟಿ ವೆಚ್ಚ ಮಾಡಲಿದೆ. ಪ್ರತಿಷ್ಠಾನವೇ ಅಗತ್ಯ ವಾದ್ಯ ಹಾಗೂ ಪರಿಕರ ನೀಡಲಿದೆ. ಅಥವಾ ಆಸಕ್ತ ಶಿಕ್ಷಕರು ಇಂತಹ ಅನಾಥ ಮಕ್ಕಳಿಗೆ ಶಾಲೆಗಳಲ್ಲಿ ಮಕ್ಕಳಿಗೆ ಕಲೆ ಬಗ್ಗೆ ತರಬೇತಿ ನೀಡುವುದಾದಲ್ಲಿ ಅವರಿಗೆ ಗೌರವ ಧನ ನೀಡಲಾಗುವುದು. ಆಸಕ್ತರು 96630 09922ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com