ಬೆಂಗಳೂರಲ್ಲಿ ನಡೆಯಲಿದೆ ಇಸ್ರೋ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ಅವರ ಸಂಗೀತ ಕಚೇರಿ

ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ದ ಆರ್ಟ್ಸ್ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ ಕೆ. ರಾಧಾಕೃಷ್ಣನ್...
ಸಂಗೀತ ಕಚೇರಿಯಲ್ಲಿ  ಡಾ.ರಾಧಾಕೃಷ್ಣನ್  (ಸಂಗ್ರಹ ಚಿತ್ರ)
ಸಂಗೀತ ಕಚೇರಿಯಲ್ಲಿ ಡಾ.ರಾಧಾಕೃಷ್ಣನ್ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ದ ಆರ್ಟ್ಸ್ ಆಯೋಜಿಸಿರುವ  ಸಂಗೀತ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಡಾ ಕೆ. ರಾಧಾಕೃಷ್ಣನ್ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 13ರಂದು ಸಂಜೆ  5 ಗಂಟೆಗೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಆಡಿಟೋರಿಯಂನಲ್ಲಿ ರಾಧಾಕೃಷ್ಣನ್ ಅವರ ಸಂಗೀತ ಕಚೇರಿ ನಡೆಯಲಿದೆ.

ಖ್ಯಾತ ಕಲಾವಿದರಾದ ಬಿ ರಘುರಾಂ (ವಯೋಲಿನ್), ಗಾನ ಕಲಾಶ್ರೀ ಚೆಲುವ ರಾಜು (ಮೃದಂಗ), ಎನ್ ಗುರುಮೂರ್ತಿ (ಘಟಂ) ರಾಧಾಕೃಷ್ಣನ್ ಅವರಿಗೆ ಸಾಥ್ ನೀಡಲಿದ್ದಾರೆ.

ವಿಜ್ಞಾನಿಯಾದ ಕಲಾವಿದ:  ಕೇರಳದ ಇರಿಞಾಲಿಕ್ಕುಡದಲ್ಲಿ ಜನಿಸಿದ ರಾಧಾಕೃಷ್ಣನ್ ಬಾಲ್ಯದಲ್ಲೇ ಸಂಗೀತ ಮತ್ತು ನೃತ್ಯ ಅಭ್ಯಾಸ ಮಾಡಿದ್ದರು. ತ್ರಿಪ್ಪೂಣಿತ್ತುರ ಮಹಿಳಾ ಸಮಾಜ ಆಯೋಜಿಸಿದ್ದ ನೃತ್ಯ ತರಗತಿಗಳಲ್ಲಿ ನೃತ್ಯಾಭ್ಯಾಸ ಮಾಡಿದ ರಾಧಾಕೃಷ್ಣನ್ ನ್ಯಾಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿರುವ ವೇಳೆ ಕೇರಳನಟನ ಮೂಲಕ ಕಲಾರಂಗಕ್ಕೆ ಪ್ರವೇಶಿಸಿದರು.  ಕಲಾನಿಲಯಂ ರಾಘವನ್, ಪಳ್ಳಿಪ್ಪುರಂ ಗೋಪಾಲನ್ ಆಶಾನ್, ಎಂಎನ್ ಕರುಣಾಕರನ್ ಪಿಳ್ಳ ಮೊದಲಾದವರ ಬಳಿ ಕಥಕ್ಕಳಿಯನ್ನು ಕಲಿತಿದ್ದಾರೆ.  ನಳಚರಿತದಲ್ಲಿ ಮೊದದ ದಿನದ ದಮಯಂತಿ, ಕುಡಲ್ ಮಾಣಿಕ್ಯದಲ್ಲಿ ಪರಶುರಾಮ ಮೊದಲಾದ ಪಾತ್ರಗಳು ಸೇರಿದಂತೆ ಕಲ್ಯಾಣ ಸೌಗಂಧಿಕಂ, ದಕ್ಷಯಾಗಂ,  ಉತ್ತರಾ ಸ್ವಯಂವರಂ, ಸಂತಾನ ಗೋಪಾಲಂ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಚೆಂಬೈ ಸಂಗೀತೋತ್ಸ ವದಲ್ಲಿ ಸಂಗೀತ ಕಚೇರಿ ನಡೆಸಿಕೊಂಡು ಬರುತ್ತಿದ್ದ ರಾಧಾಕೃಷ್ಣನ್ ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೇರಳ ಮತ್ತು ಕರ್ನಾಟಕದ ಕಲಾರೂಪಗಳನ್ನು ಪ್ರೋತ್ಸಾಹಿಸುವ ಸಲುವಾಗಿ 6 ವರ್ಷಗಳ ಹಿಂದೆ ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆ್ಯಂಡ್ ದ ಆರ್ಟ್ಸ್ ಆರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com