ರು.21.5 ಲಕ್ಷ ದರೋಡೆ

ನಗರದ ವಿವಿಧೆಡೆ ಬುಧವಾರ ಸರಣಿ ಸರಗಳ್ಳತನ ನಡೆದ ಪ್ರಕರಣದ ಮಧ್ಯೆಯೇ ಚಿನ್ನ ವ್ಯಾಪಾರಿಯನ್ನು ಅಡ್ಡಗಟ್ಟಿ ರು.21.5 ಲಕ್ಷ ನಗದನ್ನು ಜನನಿಬಿಡ ಮೈಸೂರು ಬ್ಯಾಂಕ್ ವೃತ್ತದಲ್ಲಿ ದೋಚಿದ ಪ್ರಕರಣ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸರಣಿ ಸರಗಳ್ಳತನ ನಡೆದ ಪ್ರಕರಣದ ಮಧ್ಯೆಯೇ ಚಿನ್ನ ವ್ಯಾಪಾರಿಯನ್ನು ಅಡ್ಡಗಟ್ಟಿ ರು.21.5 ಲಕ್ಷ ನಗದನ್ನು ಜನನಿಬಿಡ ಮೈಸೂರು
ಬ್ಯಾಂಕ್ ವೃತ್ತದಲ್ಲಿ ದೋಚಿದ ಪ್ರಕರಣ ನಡೆದಿದೆ.

ಆಂಧ್ರಪ್ರದೇಶದ ಆದೋನಿಯ ಚಿನ್ನದಂಗಡಿಯ ಕೆಲಸಗಾರ ಮಲ್ಲಿಕಾರ್ಜುನ ಎಂಬುವವರು ಸಂಜೆ 7.30ರ ಸುಮಾರು ಹಣವಿದ್ದು ಬ್ಯಾಗ್‍ನೊಂದಿಗೆ ನಡೆದು ಕೊಂಡು ಹೋಗುತ್ತಿದ್ದಾಗ, ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಬ್ಯಾಗ್ ಕಸಿದು ಕೊಂಡು ಪರಾರಿಯಾಗಿದ್ದಾರೆ.

ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆಂಧ್ರ ಮೂಲದ ಚಿನ್ನಾಭ ರಣ ವ್ಯಾಪಾರಿಗಳು ನಿಯಮಿತವಾಗಿ ನಗರಕ್ಕೆ ವ್ಯಾಪಾರದ ಉದ್ದೇಶದಿಂದ ನಗದು ತೆಗೆದುಕೊಂಡು ಬರುವುದು ಮಾಮೂಲು. ಈ ವಿಷಯ ಸ್ಪಷ್ಟವಾಗಿ ಗೊತ್ತಿರುವವರೇ ಕೃತ್ಯ ಎಸಗಿರುವ ಶಂಕೆ ಪೊಲೀಸರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com