ಶ್ರೀನಿವಾಸ್ ಪ್ರಸಾದ್ ರಿಂದ ದಸರಾ ಲಾಂಛನ ಬಿಡುಗಡೆ

ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆರು ಆನೆಗಳಿಗೆ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಬುಧವಾರ ಸಾಂಪ್ರಾದಾಯಿಕ ...
ದಸರಾ ಲೋಗೋ
ದಸರಾ ಲೋಗೋ
Updated on

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು  ಆಗಮಿಸಿರುವ ಆರು ಆನೆಗಳಿಗೆ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಬುಧವಾರ ಸಾಂಪ್ರಾದಾಯಿಕ ಸ್ವಾಗತ ನೀಡಲಾಯಿತು,

ಜಿಲ್ಲಾಡಳಿತ ಗಜಪಡೆಯನ್ನು ಮಂಗಳ ವಾದ್ಯಗಳೊಂದಿಗೆ ಬರ ಮಾಡಿಕೊಂಡಿತು. ಆನೆಗಳಿಗೆ ಕುಂಕುಮ ಅರಿಶಿನ ಹಚ್ಚಿ ಪೂಜೆ ಸಲ್ಲಿಸುತ್ತಿದ್ದಂತೆ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಸಕ್ಕರೆ ಸಚಿವ  ಎಚ್. ಎಸ್ ಮಹದೇವ ಪ್ರಸಾದ್ ಮತ್ತಿತರರು ಆನೆಗಳಿಗೆ ಪುಷ್ಪಾರ್ಚನೆ  ಮಾಡಿದರು.  ಅಂಬಾ ವಿಲಾಸ ಅರಮನೆಯ ಜಯ ಮಾರ್ತಾಂಡ ದ್ವಾರದ ಮೂಲಕ ದಸರಾ ಆನೆಗಳು ಪ್ರವೇಶಿಸುತ್ತಿದ್ದಂತೆಯೇ ಸಿಎಆರ್ ಪೊಲೀಸರು ಬ್ಯಾಂಡ್ ಗಳ ಮೂಲಕ ಗೌರವ ವಂದನೆ ಸಲ್ಲಿಸಿದರು.

ಆನೆಗಳ ಮೆರವಣಿಗೆ: ದಸರಾಗೆ ಆಗಮಿಸಿದ ಮೊದಲ ಆನೆ ತಂಡ ಇದಾಗಿದ್ದು, ಅಂಬಾರಿ ಹೊರಲಿರುವ ಅರ್ಜುನ ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ ಮತ್ತು ಚೈತ್ರಾ ಆನೆಗಳು ಇದರಲ್ಲಿವೆ. ಈ ಆನೆಗಳು ಸೇ,4 ರಂದೇ ಮೈಸೂರಿಗೆ ಬಂದಿದ್ದು ಇಲ್ಲಿನ ಅಶೋಕಪುರಂ ನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿತ್ತು.  5 ದಿನಗಳ ವಿಶ್ರಾಂತಿ ನಂತರ ಬುಧವಾರ ಅರಮನೆಗೆ ಕರೆತರಲಾಯಿತು.  ಅಶೋಕಪುರಂ  ಅರಣ್ಯಭವನದಿಂದ ಹೊರಟ ಆನೆಗಳು ಸಾಂಪ್ರಾದಾಯಿಕ ಅಲಂಕಾರದೊಂದಿಗೆ  ಹೊರಟ ಆನೆಗಳು ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಬಿಎನ್, ರಸ್ತೆ ಮೂಲಕ ಮೆರವಣಿಗೆಯಲ್ಲಿ  ಆಗಮಿಸಿದವು.

ಸದರಾ ಮುಗಿಯುವವರೆಗೂ ಅರಮನೆ ಆವರಣದಲ್ಲಿ ನಿತ್ಯ ತಾಲೀಮು ನಡೆಸಲಿವೆ,  ಆನೆಯೊಂದಿಗೆ  ಆಗಮಿಸಿರುವ ಮಾವುತರು ಮತ್ತು ಅವರ ಕುಟುಂಬಗಳಿಗಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ.  ಈ ಬಾರಿ ಉಪ ಸಮಿತಿಗಳಿಲ್ಲ: ಈ ಬಾರಿ  ದಸರಾವನ್ನು ಸರಳವಾಗಿ ಆಚರಿಸುತ್ತಿರುವುದರಿಂದ ಉಪ ಸಮಿತಿ ಗಳನ್ನು ರಚಿಸುವುದಿಲ್ಲ, ದಸರಾ ಕಾರ್ಯಕಾರಿ ಸಮಿತಿ ನೇತೃತ್ವದಲ್ಲೇ  ದಸರಾ  ಆಯೋಜಿಸಲಾಗವುದು ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ದಸರಾ ಮಹೋತ್ಸವ -2015 ರ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು ರೈತರ ಆತ್ಮಹತ್ಯೆ ಹಾಗೂ ಬರದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಕಚಿಮೆ ವೆಚ್ಚದಲ್ಲಿ ಸರಳ ಹಾಗೂ ಸಾಂಪ್ರಾದಾಯಿಕವಾಗಿ ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.  ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಭಾಗವಹಿಸುತ್ತಾರೆ.  ದಸರಾ ಉದ್ಘಾಟನೆಯನ್ನು ಪ್ರಗತಿಪರ ರೈತನಿಂದ ನೆರವೇರಿಸಲಾಗುವುದು.  ಸ್ಥಳೀಯ ಕಲಾವಿದರಿಗೆ ಅರಮೆನ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅರಮೆನ ಮುಂಭಾಗ ಹೊರತು ಪಡಿಸಿ ಇತರೆಡೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ಇರುವುದಿಲ್ಲ ಎಂದರು.

ರೈತ ದಸರಾ: ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರಿಗೆ ನೈತಿಕ ಸ್ಥೈರ್ಯ ತುಂಬಲು ರೈತ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com