ಧೂಮಪಾನ ಜಾಗೃತಿಗೆ ವಿದ್ಯಾರ್ಥಿಗಳ ಜಾಥಾ

ಮಾರ್ಥಾಸ್ ಆಸ್ಪತ್ರೆ ಮತ್ತು ಜೈನ್ ಕಾಲೇಜು ಸಹಯೋಗದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜೆ.ಸಿ. ರಸ್ತೆಯಿಂದ ಕಬ್ಬನ್ ಉದ್ಯಾನದವರೆಗೆಜೈನ್ ಕಾಲೇಜುವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು...
ಧೂಮಪಾನ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮ ಕುರಿತು ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಪ್ಪು ವರ್ಣದ ಉಡುಪು ತೊಟ್ಟು, ಸಿಗರೇಟ್ ಸೇವನೆಯಿಂದ ದೇಹ ಕಪ್ಪಾಗುತ್ತದೆ ಎನ್ನುವ ಸಂದೇಶ ಸಾರು
ಧೂಮಪಾನ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮ ಕುರಿತು ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಪ್ಪು ವರ್ಣದ ಉಡುಪು ತೊಟ್ಟು, ಸಿಗರೇಟ್ ಸೇವನೆಯಿಂದ ದೇಹ ಕಪ್ಪಾಗುತ್ತದೆ ಎನ್ನುವ ಸಂದೇಶ ಸಾರು

ಬೆಂಗಳೂರು: ಮಾರ್ಥಾಸ್ ಆಸ್ಪತ್ರೆ ಮತ್ತು ಜೈನ್ ಕಾಲೇಜು ಸಹಯೋಗದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜೆ.ಸಿ. ರಸ್ತೆಯಿಂದ ಕಬ್ಬನ್ ಉದ್ಯಾನದವರೆಗೆಜೈನ್ ಕಾಲೇಜುವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.

ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು,`ಬೀಡಿ ಸಿಗರೇಟ್ ನರಕಕ್ಕೆ ಟಿಕೆಟ್', `ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎನ್ನುವ ಘೋಷಣೆ ಕೂಗಿದರು. ಕಪ್ಪು ಉಡುಪು ತೊಟ್ಟ ವಿದ್ಯಾರ್ಥಿನಿ
ಯರು ಸಿಗರೇಟ್ ಸೇವನೆ ಮಾಡುವವರು ದೇಹ ಹೊಗೆಯಿಂದ ಸಂಪೂರ್ಣವಾಗಿ ಕಪ್ಪಾಗಿಬಿಡು ತ್ತದೆ ಎಂದು ಸಂದೇಶ ಸಾರಿದರು.

ಭಾರತದಲ್ಲಿ ಸುಮಾರು 11 ಕೋಟಿ ತಂಬಾಕು ಬಳಕೆದಾರರಿದ್ದಾರೆ. ಅವರಲ್ಲಿ ಏಳು ಕೋಟಿ ಮಹಿಳೆಯರಾದರೆ 4 ಕೋಟಿ ಪುರುಷರು. ಅಂದಾಜು 2,500 ಮಂದಿ ಪ್ರತಿದಿನ ಧೂಮಪಾನದಿಂದ ಸಾಯುತ್ತಿದ್ದಾರೆ. ಇಂಥ ಅಪಾಯಕಾರಿ ಚಟವಾಗಿರುವ ಧೂಮಪಾನ ತ್ಯಜಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com