ಕಸ್ತೂರಿರಂಗನ್ ವರದಿ ಪರಿಷ್ಕರಿಸಿ ಜಾರಿಗೆ ಶಿಫಾರಸು

ಜನವಸತಿ ಪ್ರದೇಶಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಮಾಡಿಸಿ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ...
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ

ಬೆಂಗಳೂರು: ಜನವಸತಿ ಪ್ರದೇಶಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಮಾಡಿಸಿ ಜಾರಿಗೆ ತರುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಿದ್ದ ಸುಮಾರು 400 ಚದರ ಕಿಲೋ ಮೀಟರ್ ಪ್ರದೇಶವನ್ನು ಕೈ ಬಿಟ್ಟಿರುವ ರಾಜ್ಯ ಸರ್ಕಾರ, ಈ ಪ್ರದೇಶದಲ್ಲಿರುವ ಜನವಸತಿಗಳಿಗೆ ಯಾವ ತೊಂದರೆಯೂ ಆಗಬಾರದು ಮತ್ತು ಸೀಮಿತ ಪ್ರಮಾಣದಲ್ಲಿ ಮರಳು, ಜಲ್ಲಿ ತೆಗೆಯಲು ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿದೆ. ಆದರೆ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಕಸ್ತೂರಿ ರಂಗನ್ ವರದಿ ಶಿಫಾರಸು ಅಂಗೀಕರಿಸಿರುವ ಸರ್ಕಾರ, ವರದಿಯ ಬಹುತೇಕ ಶಿಫಾರಸುಗಳನ್ನು ಕೈ ಬಿಟ್ಟಿದೆ.ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿ ಮಾರ್ಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಅರಣ್ಯ ಸಚಿವ ಬಿ.ರಮಾನಾಥ ರೈ, ಕಸ್ತೂರಿ ರಂಗನ್ ವರದಿಯ ಶಿಫಾರಸಿನ ಪ್ರಕಾರರಾಜ್ಯದ ಹನ್ನೊಂದು ಜಿಲ್ಲೆಗಳ ನಲವತ್ತು ತಾಲೂಕುಗಳಲ್ಲಿನ 2572 ಹಳ್ಳಿಗಳಲ್ಲಿನ
19,097 ಚದರ ಕಿಮೀ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ನಾವು ಜನವಸತಿ ಪ್ರದೇಶಗಳಿಗೆ ತೊಂದರೆ ಕೊಡದೆ, ಅಲ್ಪಪ್ರಮಾಣದಲ್ಲಿ ಅಗತ್ಯವಿರುವಷ್ಟು ಮರಳು, ಜಲ್ಲಿ ತೆಗೆಯಲು ಅವಕಾಶವಾಗುವಂತೆ ನೋಡಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಸುಮಾರು 400 ಚದರ ಕಿಮೀ ಪ್ರದೇಶವನ್ನು ವರದಿ ವ್ಯಾಪ್ತಿಯಿಂದ ಹೊರತಂದಿದ್ದೇವೆ ಎಂದು ಹೇಳಿದರು. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧ ಮಾಡಬೇಕು ಎಂಬ ಕಸ್ತೂರಿ ರಂಗನ್ ವರದಿಯ ಶಿಫಾರಸನ್ನು ಜಾರಿಗೊಳಿಸಲು ನಾವು ಸಂಪೂರ್ಣ ಒಪ್ಪಿದ್ದೇವೆ. ಆ ಮೂಲಕ ಪಶ್ಚಿಮಘಟ್ಟ ಪ್ರದೇಶಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಹದಿಮೂರು ರಾಷ್ಟ್ರೀಯ ಉದ್ಯಾನಗಳಿವೆ. ಸಂರಕ್ಷಿತಅರಣ್ಯ ಪ್ರದೇಶವಿದೆ. ಸೂಕ್ಷ್ಮ ಪರಿಸರ ವಲಯಗಳಿವೆ.  ಈ ಯಾವುದಕ್ಕೂ ತೊಂದರೆಯಾಗದಂತೆ ನಾವು ನೋಡಿಕೊಂಡಿದ್ದೇವೆ ಎಂದರು.


ಅರಣ್ಯದಲ್ಲೇ ಮೇವು ಬೆಳೆದುಕೊಡಲು ಸಿದ್ಧ

ರಾಜ್ಯದಲ್ಲಿ ಕಾಣಿಸಿಕೊಂಡಿರುವ ಭೀಕರ ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯವಾದ ಮೇವನ್ನು ಅರಣ್ಯ ಪ್ರದೇಶದಲ್ಲೇ ಬೆಳೆದು ಕೊಡಲು ಸಿದ್ಧ ಎಂದು ಅರಣ್ಯ ಸಚಿವ ಬಿ.ರಮಾನಾಥ್ ರೈ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಾನುವಾರುಗಳಿಗೆ ಎಲ್ಲೆಲ್ಲಿ ಮೇವಿನ ತೊಂದರೆ ಕಾಣಿಸಿಕೊಳ್ಳಬಹುದು? ಎಷ್ಟು ಪ್ರಮಾಣದಲ್ಲಿ ಮೇವಿನ ಅಗತ್ಯ ಬೀಳಬಹುದು ಎಂದು ವಿವರ ನೀಡಲು ಸೂಚಿಸಲಾಗಿದೆ ಎಂದರು. ಅಗತ್ಯ ಮಾಹಿತಿ ದೊರೆತ ಕೂಡಲೇ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇವು ಬೆಳೆದು, ಅದನ್ನು ಉಚಿತವಾಗಿ ಕಂದಾಯ ಇಲಾಖೆಗೆ ಪೂರೈಸು
ತ್ತೇವೆ. ಜಾನುವಾರುಗಳಿಗೆ ಯಾವುದೇ ರೀತಿಯಲ್ಲೂ ಮೇವಿಗೆ ಕೊರತೆಯಾ ಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ಎಲ್ಲ ಜಿಲ್ಲೆಗಳ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು ಜಾನುವಾರುಗಳಿಗೆ ಮೇವು ಬೆಳೆದುಕೊಡಲು ಸಜ್ಜಾಗುವಂತೆ ಹೇಳಿದ್ದೇವೆ. ಹೀಗಾಗಿ ಎಲ್ಲ ಬಗೆಯ ತಯಾರಿ ನಡೆದಿದೆ ಎಂದರು. ಬಂಡೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಗಣನೀಯ ಪ್ರಮಾಣದ ಮಳೆಯಾಗಿದ್ದು ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕೆರೆಗಳು ಭರ್ತಿಯಾಗಿವೆ ಎಂದು
ಹೇಳಿದರು. ಆದ್ದರಿಂದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ಕುಡಿಯುವ ನೀರಿನಕೊರತೆಯಾಗುವುದಿಲ್ಲ ಎಂದು ವಿವರಿಸಿದ ಅವರು, ಈಗ ಕೆರೆಗಳಲ್ಲಿ ಭರ್ತಿಯಾಗಿರುವ ನೀರು ಮುಂದಿನ ಬೇಸಿಗೆಯ ತನಕ ಪ್ರಾಣಿಗಳಿಗೆ ಕುಡಿಯಲು ಸಾಕಾಗಲಿ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com