ಎಫ್ ಟಿಐಐ ಅಧ್ಯಕ್ಷರ ನೇಮಕ ಅಡೂರು, ಕಾಸರವಳ್ಳಿ ಬೇಸರ

ಫಿಲ್ಮ್ ಆ್ಯಂಡ್ ಟೆಲಿವಿಸನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ಅಧ್ಯಕ್ಷರ ನೇಮಕದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಖ್ಯಾತ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್ ಮತ್ತು ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ...
ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ (ಸಂಗ್ರಹ ಚಿತ್ರ)
ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ (ಸಂಗ್ರಹ ಚಿತ್ರ)

ಬೆಂಗಳೂರು: ಫಿಲ್ಮ್ ಆ್ಯಂಡ್ ಟೆಲಿವಿಸನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ಅಧ್ಯಕ್ಷರ ನೇಮಕದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಖ್ಯಾತ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್ ಮತ್ತು ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅಧ್ಯಕ್ಷರಾಗಿ ನೇಮಕಗೊಂಡವರು ಯಾರೆಂಬುದೇ ಗೊತ್ತಿಲ್ಲ, ಗುಂಪಿನಲ್ಲಿ ಅವರೊಬ್ಬರಷ್ಟೇ. ಇಡೀ ಚಿತ್ರರಂಗದಲ್ಲಿ ಒಂದಷ್ಟು ಬದಲಾವಣೆಗೆ ಕಾರಣವಾಗಿರುವ ಈ ಸಂಸ್ಥೆಗೆ ಕಲೆ, ಸಾಹಿತ್ಯ, ಚಿತ್ರರಂಗ, ರಂಗಭೂಮಿ ಕ್ಷೇತ್ರದಲ್ಲಿ ಒಂದಷ್ಟು ಕೆಲಸ ಮಾಡಿರುವವರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರಕ್ಕೂ ತಾನು ಮಾಡಿರುವ ನೇಮಕ ತಪ್ಪಾಗಿದೆ ಎಂದು ಅರಿವಾಗಿದೆ. ತೀವ್ರ ಹೋರಾಟ ನಡೆದಿದ್ದರೂ ತನ್ನ ತಪ್ಪನ್ನು ಅದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಚಲನಚಿತ್ರ ರಂಗದ ಭವಿಷ್ಯದ ವ್ಯಕ್ತಿಗಳೇ ಬೀದಿಗಿಳಿದು ಹೋರಾಟ ನಡೆಸಿದರೂ ಸ್ಪಂದನೆ ದೊರೆಯದೇ ಇರುವುದು ಬೇಸರದ ಸಂಗತಿ ಎಂದ ಅವರು, ಬಾಲಿವುಡ್ ಸಹ ಈ ಆಯ್ಕೆಯನ್ನು ಟೀಕಿಸಿದೆ ಎಂದರು. ಡಬ್ಬಿಂಗ್ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಈ ಇಬ್ಬರು ನಿರ್ದೇಶಕರು, ಭಾರತದೊಳಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ಬಿಂಗ್ ನಡೆದಾಗ ಅಳಿವಿನಂಚಿನಲ್ಲಿ ಭಾಷೆಯ ಚಿತ್ರೋದ್ಯಮಕ್ಕೆ ಹೆಚ್ಚು ಪೆಟ್ಟು ಬೀಳಬಹುದು. ಹಣ, ಅಬ್ಬರ ದಿಂದಾಗಿ ಡಬ್ಬಿಂಗ್ ಚಿತ್ರಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತವೆ ಎಂದರು.

ಸುದ್ದಿಗೋಷ್ಠಿಗೆ ಮುನ್ನ ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅಡೂರು ಗೋಪಾಲಕೃಷ್ಣನ್, ಚಲನಚಿತ್ರವು
ದಿನಪತ್ರಿಕೆಯಂತಲ್ಲ. ಚಲನಚಿತ್ರ ರೂಪಿಸುವವರು ಜನರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕಾಗುತ್ತದೆ. ಪ್ರೇಕ್ಷಕರು ಹಣ ಕೊಟ್ಟು ಸಮಯ ನೀಡುತ್ತಾರೆ. ಅವರಿಗೆ ಬೇಸರ ಬಾರದಂತೆ ಸದಾಭಿಪ್ರಾಯದ ಚಿತ್ರವನ್ನು ನೀಡುವುದು ನಿರ್ದೇಶಕನ ಹೊಣೆಯಾಗಿರುತ್ತದೆ ಎಂದರು. ಗಿರೀಶ್ ಕಾಸರವಳ್ಳಿ, ವಿಶ್ರಾಂತ ಕುಲಪತಿ ಮಾಧವ ಮೆನನ್, ನಿವೃತ್ತಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com