ಕ್ಯಾಮರಾ ಬಳಸಿದರೂ ಪತ್ತೆಯಾಗದ ಶವ

ಬಾಣಸವಾಡಿಯಲ್ಲಿ ಮೂವರು ಮಕ್ಕಳ ಕೊಲೆ ಪ್ರಕರಣ ಸಂಬಂಧ ಪತ್ತೆಯಾಗದ ಓರ್ವ ಬಾಲಕಿಯ ಶವಕ್ಕಾಗಿ ಶೋಧ ಕಾರ್ಯ ಮುಂದವರೆಸಿರುವ ಪೊಲೀಸರು ಶನಿವಾರ ಚರಂಡಿ ಪೈಪ್ ಲೈನ್ ಒಳಗೆ ಕ್ಯಾಮರಾ ಇಳಿಬಿಟ್ಟು ಹುಡುಕಾಡಿದ್ದಾರೆ...
ಬಾಲಕಿಯ ಶವಕ್ಕಾಗಿ ಹುಡುಕಾಟ ನಡೆಸಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)
ಬಾಲಕಿಯ ಶವಕ್ಕಾಗಿ ಹುಡುಕಾಟ ನಡೆಸಿರುವ ಅಧಿಕಾರಿಗಳು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬಾಣಸವಾಡಿಯಲ್ಲಿ ಮೂವರು ಮಕ್ಕಳ ಕೊಲೆ ಪ್ರಕರಣ ಸಂಬಂಧ ಪತ್ತೆಯಾಗದ ಓರ್ವ ಬಾಲಕಿಯ ಶವಕ್ಕಾಗಿ ಶೋಧ ಕಾರ್ಯ ಮುಂದವರೆಸಿರುವ ಪೊಲೀಸರು ಶನಿವಾರ ಚರಂಡಿ ಪೈಪ್ ಲೈನ್ ಒಳಗೆ ಕ್ಯಾಮರಾ ಇಳಿಬಿಟ್ಟು ಹುಡುಕಾಡಿದ್ದಾರೆ.

ಶನಿವಾರ ಬೆಳಗ್ಗೆಯಿಂದಲೇ ಎಚ್‍ಬಿಆರ್ ಬಡಾವಣೆಯ ಕಿರು ಅರಣ್ಯ ಪ್ರದೇಶದಲ್ಲಿ ಮಗುವನ್ನು ತಳ್ಳಲಾಗಿದ್ದ ಮಾ್ಯನ್‍ಹೋಲ್‍ನಿಂದ ಮತ್ತೊಂದು ಮಾ್ಯನ್ ಹೋಲ್‍ವರೆಗಿನ 50 ಮೀಟರ್ ಪೈಪ್‍ನ ಒಳಗೆ ಹಗ್ಗಕ್ಕೆ ಕ್ಯಾಮರಾ, ಬೆಳಕಿನ ವ್ಯವಸ್ಥೆಗಾಗಿ ಲೈಟ್ ಕೂಡಾ ಕಟ್ಟಲಾಗಿತ್ತು. ಹಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ವಿಡಿಯೋ ಪರಿಶೀಲಿಸಿದಾಗ ಶವ ಕಾಣಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಭಾನುವಾರವೂ ಹುಡುಕಾಟ: ಕ್ಯಾಮರಾಕ್ಕೆ ಲೈಟ್ ಕಟ್ಟಿದ್ದರೂ ಸೂಕ್ರ ಬೆಳಕು ಇಲ್ಲದ ಕಾರಣ ಒಳಗೆ ಸರಿಯಾಗಿಕಾಣಿಸಿಲ್ಲ. ಶೋಧ ಕಾರ್ಯ ನಡೆಸಿದ ಭಾಗ ಹೊರತುಪಡಿಸಿ ಇನ್ನೂ ಮೂರು ಹಂತದಲ್ಲಿ ಒಳಚರಂಡಿ ಪೈಪ್‍ಗಳು ಇವೆ. ಒಂದು ಮಾ್ಯನ್‍ಹೋಲ್‍ನಿಂದ ಮತ್ತೊಂದು ಮಾ್ಯನ್‍ಹೋಲ್‍ವರೆಗೆ ಕನಿಷ್ಠವೆಂದರೂ 100 ಮೀಟರ್ ಉದ್ದ ಇವೆ. ಹೀಗಾಗಿ, ಅಷ್ಟು ಉದ್ದದ ಹಗ್ಗ ಹಾಕಬೇಕು. ಸೂಕ್ತ ಜಾಗ ಮಾಡಿಕೊಂಡು ಒಂದು ಹಗ್ಗಕ್ಕೆ ಕ್ಯಾಮರಾ ಹಾಗೂ ಲೈಟ್ ಮತ್ತೊಂದು ಹಗ್ಗಕ್ಕೆ ಹುಕ್ ಹಾಕಿ ಒಂದು ಭಾಗದಿಂದ ಮತ್ತೊಂದು ಭಾಗದವರೆಗೂ ಎಳೆಯಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಭಾನುವಾರದಿಂದ ಈ ಪ್ರಯತ್ನ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಶವವನ್ನು ಶತಾಯಗತಾಯ ಪತ್ತೆ ಮಾಡಲೇಬೇಕು ಎಂದು ಪಣ ತೊಟ್ಟಿರುವ ಹಿರಿಯ ಅಧಿಕಾರಿಗಳು, ಬೇರೆ ಬೇರೆ ಐಡಿಯಾಗಳನ್ನು ಮಾಡುತ್ತಿದ್ದು ಎಕ್ಸ್ ರೇ ಯಂತ್ರವನ್ನು ಬಳಸಲು ನಿರ್ಧರಿಸಿದ್ದಾರೆ. ಎಕ್ಸ್ ರೇ ಯಂತ್ರ ಭಾರವಾಗಿರುವ ಕಾರಣ ಅದನ್ನು ಚರಂಡಿ ಮಾರ್ಗದ ಉದ್ದಕ್ಕೂ ಸಾಗಿಸುತ್ತಾ ಪರಿಶೀಲನೆ ನಡೆಸಲು ಟ್ರಾಲಿ ವ್ಯವಸ್ಥೆ ಮಾಡಬೇಕು. ಆ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.

ಪೈಪ್ ಒಡೆಯುವುದು ಕೊನೆಯ ಪ್ರಯತ್ನ: ಆರೋಪಿ ಶವವನ್ನು ಮಾ್ಯನ್‍ಹೋಲ್‍ಗೆ ತಳ್ಳಿದ್ದಾನೆ. ಈಗಾಗಲೇ ಬಾಲಕಿಯ ಬ್ಯಾಗ್ ಪತ್ತೆಯಾಗಿದೆ. ಹೀಗಾಗಿ, ಒಳಚರಂಡಿಯೊಳಗೆ ಶವ ಇರಬಹುದು. ಪೈಪ್ ಒಡೆದು ನಷ್ಟ ಮಾಡುವ ಬದಲು ಕ್ಯಾಮರಾ ಹಾಗೂ ಇತರ ಪ್ರಯತ್ನ ಮಾಡಲಾಗುತ್ತದೆ. ಭಾರಿ ಪ್ರಮಾಣದಲ್ಲಿ ಪೈಪ್ ಗಳನ್ನು ಒಡೆಯುವದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ. ಆದರೆ, ಪೈಪ್ ಗಳನ್ನು ಒಡೆಯುವ ಪ್ರಯತ್ನಕ್ಕೆ ಕೊನೆಯ ಆದ್ಯತೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಪಿಳ್ಳಣ್ಣ ಗಾರ್ಡ್ ನ್ ನಲ್ಲಿ ವಾಸವಿದ್ದ ನಜೀಯಾರ ಮೂವರು ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಮರಳುವಾಗ ಕೊಕ್ಕರೆಗಳ ತೋರಿಸುವುದಾಗಿ ಕರೆದೊಯ್ದು ಆರೋಪಿ ಫಾಯುಮ್ ಖಾನ್ ಮಾ್ಯನ್‍ಹೋಲ್‍ನೊಳಗೆ ನೂಕಿ ಕೊಲೆ ಮಾಡಿದ್ದ. ಆರೋಪಿ ಬಂಧಿಸಿದ್ದ ಪೊಲೀಸರು ಕಳೆದ ಐದು ದಿನಗಳಿಂದ ಮೂರು ಮಕ್ಕಳ ಶವಗಳಿಗಾಗಿ ಶೋಧ ನಡೆಸಲಾಗುತ್ತಿದ್ದು ಇದುವರೆಗೆ ಇಬ್ಬರ ಶವಗಳು ಮಾತ್ರ ಪತ್ತೆಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com