
ಗುಂಡ್ಲುಪೇಟೆ: ದೇಶದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ.
ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿ ಸಿಎಸ್ಎಸ್ ಕಾರ್ಪ್ ಬಂಡೀಪುರಕ್ಕೆ 300 ಕ್ಯಾಮೆರಾ ಗಳನ್ನು ಕೊಡುಗೆಯಾಗಿ ನೀಡಿದೆ.
ಸುಮಾರು 875 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಈ ಅರಣ್ಯದಲ್ಲಿ ನೂರಕ್ಕೂ ಹೆಚ್ಚು ಹುಲಿಗಳು ವಾಸಿಸುತ್ತಿವೆ. ಅತ್ಯುತ್ತಮ ಸಂರಕ್ಷಣಾ ಕ್ರಮಗಳಿಂದಾಗಿ ಹುಲಿ ಸಂತತಿಯಲ್ಲಿ ಹೆಚ್ಚಳವಾಗಿದೆ. ಈ ಹುಲಿಗಳ ಸಂರಕ್ಷಣೆಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿ ಸಿಎಸ್ಎಸ್ ಕಾರ್ಪ್ ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗಿರುವ ಅತ್ಯಾಧುನಿಕ 300 ಕ್ಯಾಮೆರಾ ಟ್ರ್ಯಾಪರ್ ಗಳನ್ನು ಬಂಡಿಪುರಕ್ಕೆ ಹಸ್ತಾಂತರಿಸಲಾಗಿದೆ.
ಹುಲಿಗಳ ಆವಾಸಸ್ಥಾನಗಳ ಹಂಚಿಕೆ, ಭೇಟೆ ಪ್ರಕ್ರಿಯೆ ಸೇರಿದಂತೆ ಅನೇಕ ಮಹತ್ವದ ವಿಚಾರಗಳ ಅಧ್ಯಯನಕ್ಕೆ ಈ ಕ್ಯಾಮೆರಾ ಟ್ರ್ಯಾಪರ್ ಗಳು ಸಹಕಾರಿಯಾಗುತ್ತವೆ. ಅನೇಕ ಬಾರಿ ಕಾಡುಗಳ್ಳರ ಬಗ್ಗೆ ಫೋಟೋಗಳನ್ನು ತೆಗೆಯುವುದರಲ್ಲೂ ಇವು ನೆರವಾಗಿವೆ.
Advertisement