ಮಹದಾಯಿ ಹೋರಾಟಕ್ಕೆ ಯಾವ ನೈತಿಕತೆ ಇದೆ?: ವೀರಪ್ಪ ಮೊಯ್ಲಿ

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದಾದರೆ ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೆ ತನ್ನಿ ಎಂದು ಹೋರಾಟ ಮಾಡುವುದಕ್ಕೆ...
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ಉಡುಪಿ: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವುದಾದರೆ ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೆ ತನ್ನಿ ಎಂದು ಹೋರಾಟ ಮಾಡುವುದಕ್ಕೆ ಕನ್ನಡಿಗರಿಗೆ ಯಾವ ನೈತಿಕತೆ ಇದೆ ಎಂದು ಮಾಜಿ ಕೇಂದ್ರ ಸಚಿವ ಚಿಕ್ಕಬಳ್ಳಾಪುರದ ಸಂಸದ ಎಂ ವೀರಪ್ಪ ಮೊಯ್ಲಿ ಪ್ರಶ್ನಿಸಿದ್ದಾರೆ.

ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರು ಎತ್ತಿನಹೊಳೆ ಯೋಜನೆಯ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಪ್ರಶ್ನೆ ಮುಂದಿಟ್ಟು. 5 ವರ್ಷಗಳಿಂದ ಎತ್ತಿನ ಹೊಳೆ ಯೋಜನೆಯನ್ನು ಜಾರಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಆಗ ಯಾರೂ ವಿರೋಧಿಸಿರಲಿಲ್ಲ. ಈ ಯೋಜನೆ ಕುರಿತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಸಭೆ ನಡೆಸಿದ್ದರು. ದಕ್ಷಿಣ ಕನ್ನಡ, ಕೋಲಾರ ಸಹಿತ ಸುಮಾರು 10 -15 ಜಿಲ್ಲೆಗಳ ಪ್ರತಿನಿಧಿಗಳು, ರೈತರು ಈ ಸಭೆಯಲ್ಲಿದ್ದರು. 5 ಮಂದಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಅವರು ಈ ಭಾಗದಲ್ಲಿ 60 ವರ್ಷಗಳಲ್ಲಿ ಆಗಿರುವ ಮಳೆಯ ವಿವರಗಳನ್ನು ಅಧ್ಯಯನ ಮಾಡಿ ಎಷ್ಟು ನೀರು ಲಭ್ಯವಾಗುತ್ತದೆ ಎಂದು ನಿಖರವಾಗಿ ಹೇಳಿದ್ದಾರೆ.

ಯಡಿಯೂರಪ್ಪ ನಂತರ ಸದಾನಂದ ಗೌಡರು, ಜಗದೀಶ್ ಶೆಟ್ಟರ್ ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಈ 4 ಸಿಎಂಗಳು ತಜ್ಞರೊಂದಿಗೆ ಸಮಾಲೋಚನೆ ನಡೆಸಿಯೇ ಎತ್ತಿನಹೊಳೆ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಈ ಹಿಂದೆ ವಿರೋಧಿಸದೇ ಈಗ ವಿರೋಧಿಸುವಲ್ಲಿ ಏನು ಅರ್ಥ ಎಂದು ಮೊಯ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com