ಹಿರಿಯ ನಟ, ನಿರ್ದೇಶಕ ಕೆಎಸ್ಎಲ್ ಸ್ವಾಮಿ ಅಸ್ವಸ್ಥ

ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ನಟ ಕೆ.ಎಸ್.ಎಲ್.ಸ್ವಾಮಿ ಶ್ವಾಸಕೋಶದ ಸೋಂಕು ಮತ್ತು ಉಸಿರಾಟ...
ಕೆಎಸ್ಎಲ್ ಸ್ವಾಮಿ
ಕೆಎಸ್ಎಲ್ ಸ್ವಾಮಿ

ಬೆಂಗಳೂರು: ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ನಟ ಕೆ.ಎಸ್.ಎಲ್.ಸ್ವಾಮಿ ಶ್ವಾಸಕೋಶದ ಸೋಂಕು ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ಪತ್ನಿ ಬಿ.ವಿ.ರಾಧಾ ಮತ್ತು ಪುತ್ರಿ ಧನಲಕ್ಷ್ಮಿ ತಿಳಿಸಿದ್ದಾರೆ.

ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್  ಮತ್ತು ಎಂ.ಆರ್.ವಿಠಲ್ ಅವರ ಬಳಿ ಸಹಾಯಕರಾಗಿ ಸಿನಿಮಾ ಕ್ಷೇತ್ರದಲ್ಲಿ ದುಡಿಮೆ ಆರಂಭಿಸಿದ ಕೆ.ಎಸ್.ಎಲ್ ಅವರು 1966ರಲ್ಲಿ ತೂಗುದೀಪ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದರು. ಗಾಂಧಿನಗರ, ಭಾಗ್ಯಜ್ಯೋತಿ, ಮಲಯ ಮಾರುತ ಸಿನಿಮಾಗಳಲ್ಲಿ ಅವರ ಪ್ರತಿಭೆಯನ್ನು ತೋರಿಸಿದ್ದರು. ಇವರ ಜಂಬೂ ಸವಾರಿ ಮಕ್ಕಳ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು, ಪುಟ್ಟಣ್ಣ ಕಣಗಾಲ್ ಜೊತೆಯೂ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com