ಕಲ್ಬುರ್ಗಿ ಹಂತಕರ ಸುಳಿವು ನೀಡಿದರೆ 5 ಲಕ್ಷ ಬಹುಮಾನ

ಹಿರಿಯ ಸಂಶೋಧಕ ಹಾಗೂ ಖ್ಯಾತ ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆಗೆ ಸಂಬಂಧಿಸಿದಂತೆ ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಹಿರಿಯ ಸಂಶೋಧಕ ಹಾಗೂ ಖ್ಯಾತ ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆಗೆ ಸಂಬಂಧಿಸಿದಂತೆ ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರಿನ ಗೃಹ ಕಚೇರಿ  ಕೃಷ್ಣಾದಲ್ಲಿ ನಡೆದ ಜನತಾ ದರ್ಶನ ವೇಳೆ, ತಮ್ಮನ್ನು ಭೇಟಿ ಮಾಡಿದ ಸ್ವಾಮೀಜಿಗಳು ಹಾಗೂ ಕವಿಗಳ ಸಮೂಹಕ್ಕೆ ಸಿಎಂ ಸಿದ್ದರಾಮಯ್ಯ ಈ ಭರವಸೆ ನೀಡಿದರು. ಕಲ್ಬುರ್ಗಿ ಅವರ ಹತ್ಯೆಯಾಗಿ 15 ದಿನಗಳಾದರೂ ಇದುವರೆಗೂ ಹಂತಕರ ಪತ್ತೆಯಾಗದ ಹಿನ್ನೆಲೆಯಲ್ಲಿ, ಇಂದು ಪ್ರಗತಿ ಪರ ಚಿಂತಕರು ಹಾಗೂ ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂಶೋಧಕ ಡಾ. ಕಲ್ಬುರ್ಗಿ ಅವರ ಹತ್ಯೆ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ಇನಾಮು ಕೊಡುವುದಾಗಿ ತಿಳಿಸಿದ ಅವರು ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುವುದಾಗಿ ಹೇಳಿದರು.ಪ್ರಕರಣ ಸಂಬಂಧ ಸಿಐಡಿ ಹಾಗೂ ಪೊಲೀಸರ ತನಿಖೆ ಮುಂದುವರಿದಿದ್ದು ಇದುವರೆಗೂ ಯಾವುದೇ ಗಮನಾರ್ಹ ಮಾಹಿತಿ ತಿಳಿದು ಬಂದಿಲ್ಲ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com