ಸೌಹಾರ್ದಯುತ ಸಮಾಜ ನಿರ್ಮಾಣ ಶಕ್ತಿ ವಚನಕ್ಕಿದೆ: ಡಾ.ಸಿದ್ದಲಿಂಗಯ್ಯ

ವಚನಗಳನ್ನು ಕೇಳಿ ಅದನ್ನು ಪರಿಪಾಲಿಸಿದಾಗ ವ್ಯಕ್ತಿಯು ಪರಿಪೂರ್ಣನಾಗುತ್ತಾನೆ. ಜನರ ಮನಸ್ಸನ್ನು ಬದಲಿಸಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವ ಶಕ್ತಿ ವಚನಗಳಿಗಿದೆ ಎಂದು ಕವಿ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು...
ಕವಿ ಡಾ. ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)
ಕವಿ ಡಾ. ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ವಚನಗಳನ್ನು ಕೇಳಿ ಅದನ್ನು ಪರಿಪಾಲಿಸಿದಾಗ ವ್ಯಕ್ತಿಯು ಪರಿಪೂರ್ಣನಾಗುತ್ತಾನೆ. ಜನರ ಮನಸ್ಸನ್ನು ಬದಲಿಸಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವ ಶಕ್ತಿ ವಚನಗಳಿಗಿದೆ ಎಂದು ಕವಿ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗವು ಆಯೋಜಿಸಿದ್ದ ಕವಿಕಾವ್ಯ ಶ್ರಾವಣದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದ ಅವರು, ವರ್ಗರಹಿತ, ವರ್ಣರಹಿತ, ಲಿಂಗ ತಾರತಮ್ಯ ರಹಿತವಾದ
ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವುದು ವಚನಕಾರರ ಆಶಯವಾಗಿತ್ತು. ವಚನಕಾರರು 12ನೇ ಶತಮಾನದ ಆಶಯಗಳು ಪ್ರತಿಫಲನೆಗೊಂಡು 21ನೇ ಶತಮಾನದಲ್ಲಿ
ಅನುಷ್ಠಾನಗೊಂಡರೆ ನಮ್ಮ ರಾಜ್ಯವು ಕಲ್ಯಾಣ ರಾಜ್ಯವಾಗುತ್ತದೆ ಎಂದು ತಿಳಿಸಿದರು.

ವಚನಕಾರರ ಚಿಂತನೆಗಳು ಸಮಕಾಲೀನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮತ್ತು ಜನರನ್ನು ಅಗಾಧವಾಗಿ ಪ್ರಭಾವಿಸಿವೆ. ಕನ್ನಡದ ದಲಿತ ಮತ್ತು ಬಂಡಾಯ ಸಾಹಿತ್ಯದ ಸೂ#ರ್ತಿ
ವಚನಗಳಾಗಿವೆ. ಬಸವಣ್ಣನವರ ಎನಗಿಂತ ಕಿರಿಯರಿಲ್ಲ ವಚನವನ್ನು ಇಂದಿನ ಜನರು ಅರ್ಥಮಾಡಿಕೊಂಡಿದ್ದೇ ಆದರೆ ಜಗಳಗಳು, ವಾದಗಳು ಸಂಭವಿಸುವುದಿಲ್ಲ. ಪರಿಣಾಮವಾಗಿ
ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗಳ ಕೆಲಸ ಕಡಿಮೆಯಾಗುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಬಸವಣ್ಣ- ನವರು ಬಹುದೊಡ್ಡ ಸಮಾಜ ಜ್ಞಾನಿಯಾಗಿದ್ದು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಕೆಳವರ್ಗದವರನ್ನು ಕಾಯಕಜೀವಿಗಳ ನ್ನು ಮುನ್ನೆಲೆಗೆ ಕರೆತಂದು ಎಲ್ಲ ದುಡಿಯುವ ವರ್ಗದವರನ್ನು ಅನುಭವ ಮಂಟಪದ ವೇದಿಕೆಯಲ್ಲಿ ಕುಳ್ಳಿರಿಸಿ ಆತ್ಮಮಥನಕ್ಕೆ ಹಚ್ಚಿದರು ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಎಸ್ .ಪಿನಾಕಪಾಣಿ, ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಪಾಶ್ರ್ವನಾಥ್, ಕೆಎಎಸ್ ಅಧಿಕಾರಿ ಜಯವಿಭವಸ್ವಾಮಿ, ಕನ್ನಡ ಕ್ರಿಯಾಸಮಿತಿಯ ವ.ಚ.ಚನ್ನೇಗೌಡರು, ಬೆಂಗಳೂರು ನಗರ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್ ಉಪಸ್ಥಿತರಿದ್ದರು. ಹಿಂದೂಸ್ಥಾನಿ ಗಾಯಕರಾದ ದೇವೇಂದ್ರಕುಮಾರ ಪತ್ತಾರ್, ಅಮರೇಶ ಗವಾಯಿ, ರವೀಂದ್ರ ಸೊರಗಾ, ಸಿದಟಛಿರಾಮ ಕೇಸಾಪುರ, ಆಂಜನೇಯ ಗದ್ದಿ, ಸರಸ್ವತಿ ಹೆಗಡೆ, ಚೇತನಾ ಮುಧೋಳ್, ಕರ್ನಾಟಕ ಸಂಗೀತ ವಿದುಷಿಗಳಾದ ವೀಣಾಮೂರ್ತಿ, ಶಾಲಾ ಆರಾಧ್ಯ, ಜನಪದ ಗಾಯಕಿ ಸತಾ ಗಣೇಶ್, ಹವ್ಯಾಸಿ ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ರತ್ನ ವೆಂಕಟೇಶ್ ಗೀತ ಗಾಯನ ನಡೆಸಿಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com