ಗಣೇಶ ಹಬ್ಬಕ್ಕೆ ಟ್ರಾಫಿಕ್ ಜಾಮ್

ಆಷಾಢದ ನಂತರದ ಮೊದಲ ಪ್ರಮುಖ ಹಬ್ಬವಾದ ಗೌರಿ-ಗಣೇಶ ಹಬ್ಬಕ್ಕೆ ಬುಧವಾರ ನಗರದಾದ್ಯಂತ ಟ್ರಾಫಿಕ್ ಜಾಮ್ ಕಂಡುಬಂದಿತು. ಗುರುವಾರ...
ವಾಹನ ದಟ್ಟಣೆ  (ಕೃಪೆ :ಕೆಪಿಎನ್)
ವಾಹನ ದಟ್ಟಣೆ (ಕೃಪೆ :ಕೆಪಿಎನ್)

ಬೆಂಗಳೂರು: ಆಷಾಢದ ನಂತರದ ಮೊದಲ ಪ್ರಮುಖ ಹಬ್ಬವಾದ ಗೌರಿ-ಗಣೇಶ ಹಬ್ಬಕ್ಕೆ ಬುಧವಾರ ನಗರದಾದ್ಯಂತ ಟ್ರಾಫಿಕ್ ಜಾಮ್ ಕಂಡುಬಂದಿತು. ಗುರುವಾರ ಸಾರ್ವತ್ರಿಕ ರಜೆ ಇರುವುದರಿಂದ, ಹಬ್ಬದ ಖರೀದಿ ಹಾಗೂ ಹೊರ ಊರುಗಳಿಗೆ ಪ್ರಯಾಣಿಸುವವರಿಂದಾಗಿ ನಗರದ ಪ್ರಮುಖ ರಸ್ತೆಗಳು ವಾಹನ ಹಾಗೂ ಜನರಿಂದ ಕಿಕ್ಕಿರಿದವು. ಪ್ರಯಾಣಿಕರ ದಟ್ಟಣೆ ತಗ್ಗಿಸಲೆಂದೇ ಕೆಎಸ್‍ಆರ್‍ಟಿಸಿ ಒಂದು ಸಾವಿರ ಹೆಚ್ಚುವರಿ ಬಸ್‍ಗಳನ್ನು ಬಿಟ್ಟಿದ್ದರಿಂದಲೂ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ದಟ್ಟಣೆಯಿ ದ್ದರೆ, ಶಾಂತಿನಗರ, ಪೀಣ್ಯ ಹಾಗೂ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣಗಳು ಕೂಡ ಪರಿಸ್ಥಿತಿಯಿಂದ ಹೊರತಾಗಿರಲಿಲ್ಲ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿಬಜಾರ್, ವಿಜಯನಗರದ ಮಾರು ಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಇದರಿಂದಾಗಿ ಟ್ರಾಪಿsಕ್ ಇನ್ನಷ್ಟು ನಿಧಾನಗತಿಗೆ ಇಳಿಯಿತು. ಇದರ ಜತೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ಗಣೇಶನನ್ನು ಕೂರಿಸುವ ಸಿದ್ಧತೆ ನಡೆದಿರುವುದು ದಟ್ಟಣೆಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com