ನ್ಯಾಯಾಧಿಕರಣದಿಂದ ಶೀಘ್ರ ಇತ್ಯರ್ಥ ಅಸಾಧ್ಯ

ಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೆ.18 ರಂದು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
ಹೆಚ್.ಡಿ ದೇವೇಗೌಡ
ಹೆಚ್.ಡಿ ದೇವೇಗೌಡ

ಖಾನಾಪುರ: ಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೆ.18 ರಂದು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.

ಕಣಕುಂಬಿಗೆ ತೆರಳಿ ಯೋಜನೆಯ ಕಾಮಗಾರಿ ಸ್ಥಿತಿಗತಿ ವೀಕ್ಷಿಸಿದ ದೇವೇಗೌಡರು ಕರ್ನಾಟಕ ನೀರಾವರಿ ನಿಗಮ ಉಪವಿಭಾಗ ಕಾರ್ಯ ನಿರ್ವಾಹಕ ಅಧಿಕಾರಿ ಮಧುಕರ ಅವರಿಂದ ಸವಿಸ್ತಾರ ಮಾಹಿತಿ ಪಡೆದುಕೊಂಡರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ದೇವೇಗೌಡರು, ಗೋವಾ ಮತ್ತು ಕರ್ನಾಟಕ ಸರ್ಕಾರ ಒಂದೆಡೆ ಕುಳಿತು ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಗೋವಾ ಸರ್ಕಾರ ಕೃಷಿಗಿಂತ ಮೀನು ಸಂತತಿ ಬಗ್ಗೆ ಮಾತನಾಡುತ್ತಿದೆ. ಗೋವಾ ಕೂಡ ನಮ್ಮ ಸಹೋದರ ರಾಜ್ಯ. ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಎರಡು ರಾಜ್ಯಗಳು ಒಟ್ಟಾಗಿ ಕುಳಿತು ಚರ್ಚೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದೇವೇಗೌಡರು, ಕಳಸಾ-ಬಂಡೂರಿ ವಿವಾದ ನ್ಯಾಯಾಧಿಕರಣದಲ್ಲಿದೆ. ಇದರಿಂದಾಗಿ ಸಮಸ್ಯೆ ಇತ್ಯರ್ಥ ವಿಳಂಬವಾಗಬಹುದು. ಹಾಗಾಗಿ ಪ್ರಧಾನಮಂತ್ರಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ನಾನೂ ಖುದ್ದಾಗಿ ಪ್ರಧಾನಿಯವರನ್ನು ಭೇಟಿ ಮಾಡಿ ಸಮಸ್ಯೆ ತೀವ್ರತೆ ಮನವರಿಕೆ ಮಾಡಿಕೊಡುವೆ ಎಂದರು.

ಯಡಿಯೂರಪ್ಪ ಪ್ರಧಾನಿ ಮೋದಿ ಮನವೊಲಿಸಲಿ: ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಈಗ ನಾವೇ ಯಡಿಯೂರಪ್ಪ ಅವರಿಗೆ ನಾಯಕತ್ವ ಕೊಡ್ತೀವಿ. ಮಹದಾಯಿ ಯೋಜನೆ ವ್ಯಾಪ್ತಿಯ ಜನರಿಗೆ ಅಗತ್ಯವಿರುವ 7.5 ಟಿಎಂಸಿ ನೀರನ್ನು ತಾತ್ಕಾಲಿಕವಾಗಿ ದೊರಕಿಸಿಕೊಡಲು ಪ್ರಧಾನಿಯನ್ನು ಮನವೊಲಿಸಲ್ಲಿ ಎಂದು ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com