ಬೆಂಗಳೂರು: ನಗರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಇಂದು (ಸೆ.20) ಖಾಸಗಿ ವಾಹನ ನಿಷಿದ್ಧ. ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿದ್ದರೆ ಅದಕ್ಕೆ ಬಿಎಂಟಿಸಿ ಬಸ್‍ನ್ನೇ ಬಳಸಬೇಕು. ತುರ್ತು ಸೇವೆಗಳ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
ಕಬ್ಬನ್ ಪಾರ್ಕ್ ಹೊರತುಪಡಿಸಿದರೆ, ಜನವಸತಿ ಪ್ರದೇಶದಲ್ಲಿ ಇದೇ ಮೊದಲು ಇಂತಹ ಕಾರ್ಯಕ್ರಮ ನಡೆಯುತ್ತಿದೆ. ವಾಹನಗಳ ಬಳಕೆ ಇಲ್ಲದ ಕಾರಣ ಅದೇ ಬಡಾವಣೆಯ ಯಾವ ಭಾಗಕ್ಕೆ ಸಂಚರಿಸಿದರೂ ಬಿಎಂಟಿಸಿ ಬಸ್ ದರ ರು.5 ಮಾತ್ರ.
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಬಿಎಂಟಿಸಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹೆಚ್‍ಎಸ್‍ಆರ್ ಬಡಾವಣೆಯಲ್ಲಿ ಓಪನ್ ಸ್ಟ್ರೀಟ್ಸ್-ಬೆಂಗಳೂರು ಎಂಬ ಅಪರೂಪದ ಕಾರ್ಯಕ್ರಮ ಆಯೋಜಿಸಿದೆ.
ಲೇಔಟ್‍ನ 4 ಜಾಗಳಲ್ಲಿ
Advertisement