ಮುಜರಾಯಿಗೆ ಧರ್ಮಸ್ಥಳ ದೇಗುಲ: ಚರ್ಚೆಗೆ ಆಹ್ವಾನ

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ವಿಚಾರದಲ್ಲಿ ಸಚಿವ ಜಯಚಂದ್ರ...
ಧರ್ಮಸ್ಥಳ ದೇವಸ್ಥಾನ
ಧರ್ಮಸ್ಥಳ ದೇವಸ್ಥಾನ

ಮಂಗಳೂರು: ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ವಿಚಾರದಲ್ಲಿ ಸಚಿವ ಜಯಚಂದ್ರ ವ್ಯತಿರಿಕ್ತ ಹೇಳಿಕೆ ನೀಡಿರುವುದನ್ನು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಆಕ್ಷೇಪಿಸಿದೆ. ಅಲ್ಲದೆ ಈ ಬಗ್ಗೆ ಬಹಿರಂಗ ಚರ್ಚೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಿದೆ.

ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ತರಲು ಮುಜರಾಯಿ ಸಚಿವರ ಟಿಪ್ಪಣಿ ಉಲ್ಲೇಖಿಸಿ, ಕಾಯ್ದೆ ಪ್ರಕಾರ ಪ್ರಸ್ತಾವನೆ ಕಳುಹಿಸುವಂತೆ ಇಲಾಖಾ ಆಯುಕ್ತರು ಡಿಸಿಗೆ ನಿರ್ದೇಶನ ಕಳುಹಿಸಿದ್ದಾರೆ. ಇದರ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಬಹುತೇಕ ಮಂದಿಗೆ ಸುಪ್ರೀಂ ಕೋರ್ಟ್‍ನ ಆದೇಶದಲ್ಲೇನಿದೆ ಮತ್ತು ಧಾರ್ಮಿಕ ದತ್ತಿ ಕಾಯ್ದೆಯಲ್ಲೇನಿದೆ ಎಂಬ ಮಾಹಿತಿ ಇಲ್ಲ. ಈ ವಿವರಗಳನ್ನು ದಾಖಲೆ ಸಹಿತ ಮುಂದಿಡಲಾಗಿದೆ. ಆದರೂ ವೀರೇಂದ್ರ ಹೆಗ್ಗಡೆಯವರಾಗಲೀ, ಅವರ ಅಧಿಕೃತ ಪ್ರತಿನಿಧಿಯಾಗಲೀ ಪ್ರತಿಕ್ರಿಯಿಸಿಲ್ಲ ಎಂದು ಟ್ರಸ್ಟ್ ಆರೋಪಿಸಿದೆ.

ಸಚಿವ ಜಯಚಂದ್ರ ಕೂಡ ಸರಿಯಾಗಿ ಅಧ್ಯಯನ ಮಾಡದೆ ಯಾವುದೋ ಒತ್ತಡದಿಂದ ಹೇಳಿಕೆ ನೀಡಿದ್ದಾರೆ. ಕಾನೂನು ಸಚಿವರಾಗಿದ್ದರೂ ಕಾನೂನಿಗೆ ವಿರುದ್ಧ ಹೇಳಿಕೆ ನೀಡುವ ಅಧಿಕಾರ ಅವರಿಗೆ ಇಲ್ಲ, ಅಲ್ಲದೆ ಅವರ ಹೇಳಿಕೆಯಿಂದ ಕಾಯ್ದೆ ಬದಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಮಾಧ್ಯಮಗಳ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ.

ಈ ಚರ್ಚೆ ಕೇವಲ ಕಾನೂನು ವಿಮರ್ಶೆಗೆ ಸೀಮಿತವಾಗಿ ನಡೆಯಬೇಕು ಎಂದು ಟ್ರಸ್ಟ್ ಸವಾಲು ಹಾಕಿದೆ. ಧರ್ಮಸ್ಥಳ ದೇವಸ್ಥಾನ ಕಾನೂನು ಮೀರಿ ಖಾಸಗಿಯಾಗಿ ಮುಂದುವರಿಯಬಹುದಾದರೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ಇತ್ಯಾದಿ ನೂರಾರು ದೇವಸ್ಥಾನಗಳೂ ಖಾಸಗಿಯಾಗಬಾರ ದೇಕೆ ಎಂಬ ಪ್ರಶ್ನೆಯೂ ಚರ್ಚೆಯೂ ಆಗಲಿ ಎಂದು ಟ್ರಸ್ಟ್ ಸವಾಲು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com