ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ಪೊಲೀಸರಿಂದ ಒಂಟೆಗಳ ರಕ್ಷಣೆ
ಮಹದೇವಪುರದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 4 ಒಂಟೆಗಳನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಗೋ ಶಾಲೆಗೆ ಕಳುಹಿಸಿದ್ದಾರೆ. ಕಸಾಯಿ ಖಾನೆಗೆ...
ಬೆಂಗಳೂರು: ಮಹದೇವಪುರದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 4 ಒಂಟೆಗಳನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಗೋ ಶಾಲೆಗೆ ಕಳುಹಿಸಿದ್ದಾರೆ. ಕಸಾಯಿ ಖಾನೆಗೆ ಒಂಟೆಗಳನ್ನು ಸಾಗಾಣೆ ಮಾಡುತ್ತಿದ್ದ ಕುರಿತು ಪ್ರಾಣಿ ದಯಾಸಂಘದ ಕಾರ್ಯಕರ್ತರು ದೂರು ನೀಡಿದ ಮೇರೆಗೆ ಮಹದೇವಪುರದ ವಿಜಿನಾಪುರ ಫ್ಲಾಟ್ ಫಾರಂ ರಸ್ತೆಯಲ್ಲಿ 3 ಒಂಟೆಗಳನ್ನು ಮತ್ತು ಮಹದೇವಪುರ ಬಿಬಿಎಂಪಿ ವಾರ್ಡ್ ಕಚೇರಿ ಬಳಿ 1 ಒಂಟೆಯನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಬಿಡಲಾಗಿದೆ. ಈ ಸಂಬಂಧ ಒಂಟೆ ಸಾಗಾಣೆ ಮಾಡುತ್ತಿ ದ್ದವರ ವಿರುದ್ಧ ರಾಮಮೂರ್ತಿನಗರ ಮತ್ತು ಕೆ.ಆರ್.ಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸರಗಳ್ಳತನ: ದ್ವಿಚಕ್ರ ವಾಹನದಲ್ಲಿ ಬಂದದುಷ್ಕರ್ಮಿಗಳು ಮಹಿಳೆಯೊಬ್ಬರ ಸರ ಕಿತ್ತು ಕೊಂಡು ಪರಾರಿಯಾಗಿರುವ ಘಟನೆ ಚಂದ್ರ ಲೇಔಟ್‍ನಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಬೆಳಗ್ಗೆ ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸುತ್ತಿದ್ದ ಸರಸ್ವತಿ (59) ಎಂಬುವವರ 80 ಗ್ರಾಂ ಸರವನ್ನು ವಿಳಾಸ ಕೇಳುವ ನೆಪದಲ್ಲಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ