ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆ ಸೆಂಟ್ ಮಾರ್ಕ್ಸ್ ಕೆಥಡ್ರಲ್ ಚರ್ಚ್‍ನಲ್ಲಿ ಕೆಟ್ಟು ನಿಂತ ಲಿಫ್ಟ್ ನಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಸೇರಿ 9 ಮಂದಿಯನ್ನು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಸುಮಾರು 2 ತಾಸಿಗೂ ಹೆಚ್ಚು ಕಾಲ ಜನರು ಸಿಲುಕಿದ್ದ ಕಾರಣ ಅವರಿಗೆ ಉಸಿರುಗಟ್ಟಿದ ಅನುಭವವಾಗಿತ್ತು. ಪರಿಸ್ಥಿತಿ ಕೈ ಮೀರುವ ಮೊದಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ 9 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು. ದೊಡ್ಡನೆಕ್ಕುಂದಿ 7ನೇ ಕ್ರಾಸ್‍ನ ರಾಮ್ (70), ಕ್ಯಾಥೆಡ್ರಿನ್ (32), ಮರ್ಲಿನ್ (35), ಪೀಟರ್ (45), ಗ್ಸೇವಿಯರ್ (40), ಅಬಿsಶೇಕ್ ಪಾಲ್ (13), ಶರಲಾ (3) ಹಾಗೂ ಇನ್ನಿಬ್ಬರನ್ನು ರಕ್ಷಿಸಲಾಗಿದೆ.