ಹುಸಿ ಬಾಂಬ್: ಧನ್ಯ ಪಾತ್ರವಿಲ್ಲ

ಕೆಐಎಎಲ್ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಸಂದೇಶ ಮತ್ತು ಕರೆ ಮಾಡಿ ಬಂಧಿತನಾಗಿರುವ...
ಗೋಕುಲ್
ಗೋಕುಲ್
 ಬೆಂಗಳೂರು: ಕೆಐಎಎಲ್ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಸಂದೇಶ ಮತ್ತು ಕರೆ ಮಾಡಿ ಬಂಧಿತನಾಗಿರುವ ಆರೋಪಿ ಎಂ.ಜಿ.ಗೋಕುಲ್‍ನ ಕೃತ್ಯಕ್ಕೆ ಸ್ನೇಹಿತೆ ಧನ್ಯ ಯಾವುದೇ ರೀತಿಯಲ್ಲೂ ಸಹಕರಿಸಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಕಾಲೇಜಿನ ಸಹಪಾಠಿ ಹಾಗೂ ತಮ್ಮದೇ ಊರಿನವನು ಎನ್ನುವ ಕಾರಣದಿಂದ ಜೋಸ್ ಪತ್ನಿ ಧನ್ಯ, ಗೋಕುಲ್ ಜತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಆಕೆಗೆ ಆರೋಪಿಯ ಕುತಂತ್ರದ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಪತಿಯಿಂದ ದೂರು ಮಾಡಿ ಆಕೆಯನ್ನು ಓಲೈಸಿಕೊಳ್ಳುವುದಕ್ಕೆ ಗೋಕುಲ್ ಏರ್ ಪೋರ್ಟ್‍ಗೆ ಹುಸಿ ಕರೆ ಮಾಡಿದ್ದಾನೆ. ಇದರಲ್ಲಿ ಸ್ನೇಹಿತೆಯ ಪಾತ್ರವಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಡಿಸಿಪಿ ಆರ್.ರಮೇಶ್ ತಿಳಿಸಿದ್ದಾರೆ.
ಶಾಲೆ ಮುಗಿಸಿಕೊಂಡು ಬರುವ ಮಕ್ಕಳಿಗೆ ಕೀಲಿ ಕೊಡುವುದಾಗಿ ಹೇಳಿ ಧನ್ಯರಿಂದ ಗೋಕುಲ್ ಮನೆಯ ಕೀಲಿ ಪಡೆದುಕೊಂಡಿದ್ದ. ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ಕೀಲಿ ತೆಗೆದು ಜೋಸ್‍ನ ಚಾಲನ ಪರವಾನಗಿ ಮತ್ತು ಪಾಸ್ ಪೋ ರ್ಟ್ ಕದ್ದು ಜೆರಾಕ್ಸ್ ಮಾಡಿಸಿ ಅದೇ ದಾಖಲೆಗಳನ್ನು ಬಳಸಿ ಮೊಬೈಲ್ ಮತ್ತು ಸಿಮ್  ಕಾರ್ಡ್ಖರೀದಿಸಿರುವುದು ತನಿಖೆಯಿಂದ ಖಚಿತವಾಗಿದೆ. ಅಲ್ಲದೇ ಜಿತು ಜೋಸ್ ಭಯೋತ್ಪಾದಕ ಸಂಘಟನೆಯಿಂದ ಆಕರ್ಷಿತವಾಗಿದ್ದಾನೆಂದು ಬಿಂಬಿಸಲು ಜೋಸ್ ಮನೆಯಲ್ಲಿ ಮುಸ್ಲಿಂರು ಧರಿಸುವ ಟೋಪಿ ಮತ್ತು ಡ್ಯಾಗರ್ ಇಟ್ಟಿದ್ದ. ತನ್ನ ಹೆಸರಿನಲ್ಲಿ ಸಿಮ್ ಖರೀದಿಸಿ ಹುಸಿ ಕರೆ ಮಾಡಿದ್ದ ವಿಚಾರ ಜೋಸ್ ದಂಪತಿಗೆ ತಿಳಿದಿರಲಿಲ್ಲ. ಸೋಮವಾರ (ಸೆ.21) ಆರೋಪಿ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com