ಅಶ್ವಿನ್ ಖಾತೆಯಲ್ಲಿ ರೂ. 12 ಕೋಟಿ!

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಅವರ ಮತ್ತಷ್ಟು ಅಕ್ರಮಗಳು ಬಯಲಾಗಿವೆ...
ಆರೋಪಿ ಅಶ್ವಿನ್
ಆರೋಪಿ ಅಶ್ವಿನ್

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಅವರ ಮತ್ತಷ್ಟು ಅಕ್ರಮಗಳು ಬಯಲಾಗಿವೆ.

ಹೈದರಾಬಾದ್‍ನ ಕೋಟಕ್ ಮಹಿಂದ್ರ ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವ ಅಶ್ವಿನ್‍ರಾವ್ ಅವರ ಖಾತೆಯಲ್ಲಿ ಕೋಟ್ಯಂತರ ರುಪಾಯಿ ವಹಿವಾಟು ನಡೆದಿರುವ ಬಗ್ಗೆ ಎಸ್‍ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಒಂದೇ ತಿಂಗಳಲ್ಲಿ ಸುಮಾರು ರೂ. 3 ಕೋಟಿ ಅವರ ಖಾತೆಗೆ ಜಮಾ ಆಗಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಅಲ್ಲದೆ, ಆತನ ಖಾತೆಯಲ್ಲಿ ರೂ, 12 ಕೋಟಿ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಹಿವಾಟಿನ ವಿವರ: 2006 ರಿಂದ 2015ರವರೆಗೆ ನಡೆಸಿರುವ ವಹಿವಾಟಿನಲ್ಲಿ ಲಕ್ಷ ರೂ.ಇತ್ತು. 2006-09 ರ ಆವಧಿಯಲ್ಲಿ ರೂ. 20 ರಿಂದ 25 ಲಕ್ಷ ವಹಿವಾಟು ನಡೆದಿದೆ. ಕ್ರಮೇಣ ಪ್ರತಿ ದಿನ ರೂ. 10ರಿಂದ 20 ಲಕ್ಷ ಹಣ ಅವರ ಖಾತೆಗೆ ಜಮಾ ಆಗಿದೆ. ಈ ಅವಧಿಯಲ್ಲಿ ಒಮ್ಮೆ 10ಲಕ್ಷ ರೂ.ನ ಚೆಕ್‍ಬೌನ್ಸ್ ಆಗಿದೆ. 2014ರ ಸೆಪ್ಟೆಂಬರ್ ತಿಂಗಳಲ್ಲಿ ರೂ, 7 ಲಕ್ಷ ಹಣ ಖಾತೆಯಲ್ಲಿ ಇರುವುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com