ವೈದ್ಯರ ಶಿಷ್ಯವೇತನ ಪರಿಷ್ಕರಣೆಗೆ ಸಂಪುಟ ಅಸ್ತು

ರಾಜ್ಯದ ಸ್ವಾಯತ್ತ ವೈದ್ಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಣೆ ಜತೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಸ್ವಾಯತ್ತ ವೈದ್ಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಣೆ ಜತೆಗೆ ಉನ್ನತ ವ್ಯಾಸಂಗ ನಡೆಸುವ ವೈದ್ಯರ ಶಿಷ್ಯವೇತನ ಪರಿಷ್ಕರಣೆಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ವೈದ್ಯರ ಮುಷ್ಕರ ಸಂದರ್ಭದಲ್ಲಿ ಸರ್ಕಾರ ನೀಡಿದ ಈ ಭರವಸೆ ಈಡೇರಿಸಬೇಕು ಎಂದು ಕೆಲ ಸಚಿವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಶಿಷ್ಯವೇತನ ಪರಿಷ್ಕರಣೆಯಿಂದ ಆರ್ಥಿಕ ಹೊರೆಯಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಈ ಪರಿಶೀಲನೆ ಸೂಕ್ತ ಎಂಬರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಶಿಷ್ಯವೇತನ ಪರಿಷ್ಕರಣೆ ಬಗ್ಗೆ ಪಟ್ಟು ಹಿಡಿದರು.

ಹೀಗಾಗಿ ಎಂಬಿಬಿಎಸ್ ವಿದ್ಯಾರ್ಥಿಗಳ ಶಿಷ್ಯ ವೇತನ ಮೊದಲ ವರ್ಷ 15 ಸಾವಿರದಿಂದ 20 ಸಾವಿರಕ್ಕೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೊದಲ ವರ್ಷ 25 ಸಾವಿರದಿಂದ 30 ಸಾವಿರಕ್ಕೆ 2ನೇ ವರ್ಷ 35 ಸಾವಿರ, ಮೂರನೇ ವರ್ಷ 40 ಸಾವಿರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನಾತಕೋತ್ತರ ವೈದ್ಯರ ಶಿಷ್ಯ ವೇತನ 30 ಸಾವಿರದಿಂದ 40 ಸಾವಿರ, 2ನೇ ವರ್ಷ 45 ಸಾವಿರ, 3ನೇ ವರ್ಷ 50 ಸಾವಿರ ಹೆಚ್ಚಳವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com