ಹಿಂದೂಗಳ ಭಾವನೆಗಳಿಗೆ ದಕ್ಕೆ ತಂದ ಆರೋಪ: ಭಗವಾನ್, ಚಂಪಾ ವಿರುದ್ಧ ಕೇಸ್

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಸಾಹಿತಿಗಳಾದ ಕೆ.ಎಸ್ ಭಗವಾನ್, ಚಂಪಾ ವಿರುದ್ಧ ಪ್ರಕರಣ...
ಭಗವಾನ್- ಚಂಪಾ
ಭಗವಾನ್- ಚಂಪಾ

ಉಪ್ಪಿನಂಗಡಿ: ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಸಾಹಿತಿಗಳಾದ ಕೆ.ಎಸ್ ಭಗವಾನ್, ಚಂಪಾ ವಿರುದ್ಧ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಈ ಇಬ್ಬರು ಸಾಹಿತಿಗಳು ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ಬಗ್ಗೆ ಟೀಕಿಸಿದ್ದರು, ಅಲ್ಲದೇ, ಭಗವದ್ಗೀತೆ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಹೊಸಮೂಲೆ ನಿವಾಸಿ ಶ್ಯಾಮಸುದರ್ಶನ್ ಭಟ್ ಎಂಬುವವರು ದೂರು ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 295/ಎ, 150/ಎ ಮತ್ತು 34ರಡಿಯಲ್ಲಿ ಮೊಕದ್ದಮೆ ದಾಖಲಾಗಿದೆ. ಸೆಪ್ಟೆಂಬರ್ 21ರಂದು ಭಗವಾನ್ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿ ನಂ.1 ಕೆಎಸ್ ಭಗವಾನ್ ಮತ್ತು ಆರೋಪಿ ನಂ.2  ಚಂಪಾ ಎಂದು ಹೆಸರಿಸಲಾಗಿದ್ದು, ಜೊತೆಗೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ನಂ.3 ಸೆಲ್ಲಿ ಎಂದು ದಾಖಲಾಗಿದೆ. 

ಈ ಮೂವರ ಮೇಲೆ ಎಫ್ ಐಆರ್ ದಾಖಲಾಗಿದ್ದು, ಪ್ರಕರಣವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಗಾಂಧಿಭವನದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಈ ಇಬ್ಬರು ಸಾಹಿತಿಗಳು ಹಿಂದೂ ಧಾರ್ಮೀಕತೆ ಬಗ್ಗೆ ಟೀಕಿಸಿದ್ದರು. ರಾಮಾಯಣ ಓದುವವರೆಲ್ಲ ಭಯೋತ್ಪಾದಕರೂ ಎಂಬ ರೀತಿಯಲ್ಲಿ ಮಾತನಾಡಿದ್ದರು. ಹೀಗಾಗಿ ಹಿಂದೂ ಧಾರ್ಮೀಕತೆಗೆ ಧಕ್ಕೆ ತಂದಿರುವ ಈ ಸಾಹಿತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಾಮ್ ಸುಂದರ್ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com