ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇಬಲ್ ಆಪರೇಟರ್ ಮಾಲತೇಶ್ ಎಂಬಾತನನ್ನು...
ಬೆಂಗಳೂರು: ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇಬಲ್ ಆಪರೇಟರ್ ಮಾಲತೇಶ್ ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಾಲತೇಶ್ ಹಾಗೂ ಬಾಲಕಿಗೆ ಪರಿಚಯವಿತ್ತು. ಬುಧವಾರ ಸಂಜೆ 4.30ರ ವೇಳೆಗೆ ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಪುಸ್ತಕ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಖಾಸಗಿ ಜಾಗದಲ್ಲಿ ಮುಟ್ಟಿದ್ದಾನೆ.
ಇದರಿಂದ ನೊಂದ ಬಾಲಕಿ ಕೂಗಾಡಲು ಆರಂಭಿಸಿದಳು. ಹೀಗಾಗಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಮನೆಗೆ ತೆರಳಿದ ಬಾಲಕಿ ನಡೆದ ಘಟನೆಯನ್ನು ಪಾಲಕರ ಬಳಿ ವಿವರಿಸಿದ್ದಳು. ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ