ಅಕ್ರಮ ಹಂದಿ ಸಾಕಣೆ ದಂಧೆಯ ಮಟ್ಟ ಹಾಕಿ: ಜ್ವರ ಹೆಚ್ಚಳ ಹಿನ್ನೆಲೆ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮೆದುಳು ಜ್ವರ ಹೆಚ್ಚಲು ಕಾರಣವಾಗುತ್ತಿರುವ ಅಕ್ರಮ ಹಂದಿ ಸಾಕಾಣಿಕೆ ದಂಧೆಯನ್ನು ಮಟ್ಟ ಹಾಕಲು ಜಿಲ್ಲಾ ....
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮೆದುಳು ಜ್ವರ ಹೆಚ್ಚಲು ಕಾರಣವಾಗುತ್ತಿರುವ ಅಕ್ರಮ ಹಂದಿ ಸಾಕಾಣಿಕೆ ದಂಧೆಯನ್ನು ಮಟ್ಟ ಹಾಕಲು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸೋಮವಾರ ನಡೆದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯ ವೇಳೆ ಆರೋಗ್ಯ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಈ ಆದೇಶ ನೀಡಿದ್ದಾರೆ. ಅಕ್ರಮ ಹಂದಿ ಸಾಕಾಣಿಕೆ ಮಾಹಿತಿ ಯನ್ನು ಸಭೆಗೆ ಡಿಎಚ್‍ಒ ತಿಳಿಸಿದರು.
ಈಗಾಗಲೇ 4 ಮೆದುಳು ಜ್ವರ ಪ್ರಕರಣ ಪತ್ತೆ-ಯಾಗಿದೆ. ಚಿಕ್ಕಬಾಣಾವರ, ಅಲ್ಲಾಳಸಂದ್ರ, ಮಂಡೂರು, ಕಣ್ಣೂರು ವ್ಯಾಪ್ತಿಯಲ್ಲಿ ಇಂಥ ದಂಧೆಯಲ್ಲಿ ಭಾಗಿಯಾಗಿದ್ದ ಮೂರು ಪ್ರಕರಣ ಪತ್ತೆಹಚ್ಚಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದರು.

ಅವೈಜ್ಞಾನಿಕವಾಗಿ ಹಂದಿ ಸಾಕಾಣಿಕೆ ಒಂದು ದೊಡ್ಡ ಮಾಫಿಯಾ, ಅವರ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ ಎಂದು ಅಧಿಕಾರಿ ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತ ಪಡಿಸಿದರು. ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ  ಡಿಸಿ, ತಹಶೀಲ್ದಾರ್ ಪೊಲೀಸ್ ನೆರವು ಪಡೆದು ತಡೆಗಟ್ಟುವಂತೆ ಸೂಚಿಸಿದರು. ಇದೇ ವೇಳೆ ಕೆಡಿಪಿ ಸದಸ್ಯರು ಕೆಎಎಫ್ ಸಿ ಅವಗಡವೊಂದನ್ನು ಪ್ರಸ್ತಾಪಿಸಿದರು. ಕೆವಲ 40 ದಿನದಲ್ಲಿ ಕೋಳಿ ಮರಿ ಬೆಳವಣಿಗೆಗಾಗಿ ಇಂಜೆಕ್ಷನ್ ನೀಡಲಾಗುತ್ತಿದೆ. ಇದು ಮನುಷ್ಯರ  ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು. ರೋಗ ಪೀಡಿತ ಕೋಳಿಗಳಿಗೆ ಜಂಟಾಮೈಸಿನ್ ಎಂಬ ಆಂಟಿ ಬಯೋಟಿಕ್ ಇಂಜೆಕ್ಷನ್ ಕೊಡುವುದು ಸಹಜ. ಆದರೆ ರೋಗ ಮುಕ್ತವಾದ ನಂತರವಷ್ಟೇ ಕೋಳಿ ಬಳಬೇಕಾಗುತ್ತದೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಬೆಂಗಳೂರು ನಗರ ಜಿಲ್ಲಾ  ವ್ಯಾಪ್ತಿಯಡಿ 248, ಬಿಬಿಎಂಪಿ ವ್ಯಾಪ್ತಿಯಲ್ಲಿ 1100 ಶಂಕಿತ ಡೇಂಘೀ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಆರು ಮಂದಿ ಮೃತ ಪಟ್ಟಿದ್ದಾರೆ ಎಂಬುದು ಖಚಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದರು.

ಹಾಸ್ಟೆಲ್‍ಗಳಿಗೆ ಸ್ವಂತ ನೆಲೆ: ಹಾಸ್ಟೆಲ್ ಗಳ ಪರಿಸ್ಥಿತಿ ಗಮನಿಸಲು ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಸಿ ದರು. ಹಾಸ್ಟೆಲ್ ಅವ್ಯವಸ್ಥೆ  ಕುರಿತು ಕೆಡಿಪಿ ಸದಸ್ಯರು ಸಭೆಯ ಗಮನಕ್ಕೆ ತಂದಾಗ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಎಚ್ಚರಿಕೆ ನೀಡಿದರು.  ಇನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ 29 ಹಾಸ್ಟೆಲ್ ಗಳಿಗೆ ಸ್ವಂತ ನೆಲೆ ಕಲ್ಪಿಸಲು ಜಿಲ್ಲಾಧಿಕಾರಿ ಯವರಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com