ಬಡ್ತಿಗಾಗಿ ನಕಲಿ ಪ್ರಮಾಣಪತ್ರ: ಕೆಲಸ ಕಳೆದುಕೊಂಡ ಅತಿಬುದ್ಧಿವಂತ!

ಬಡ್ತಿ ಪಡೆಯಲು ನಕಲಿ ದಾಖಲೆ ಸಲ್ಲಿಸಿದ್ದ ವ್ಯಕ್ತಿಯೊಬ್ಬ ಸೇವೆಯಿಂದಲೇ ಅಮಾನತಾದ ಪ್ರಸಂಗ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಡ್ತಿ ಪಡೆಯಲು ನಕಲಿ ದಾಖಲೆ ಸಲ್ಲಿಸಿದ್ದ ವ್ಯಕ್ತಿಯೊಬ್ಬ ಸೇವೆಯಿಂದಲೇ ಅಮಾನತಾದ ಪ್ರಸಂಗ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ.

ಬೆಂಗಳೂರಿನ ಎಸ್‍ಕೆಎಸ್‍ಜೆಟಿ ಸಂಸ್ಥೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಜಿ.ಕಿಶನ್ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿಗೆ ಇಲಾಖೆಗೆ ಸಲ್ಲಿಸಿದ್ದ ಅಕೌಂಟ್ಸ್ ಹೈಯರ್ ಪ್ರಮಾಣಪತ್ರವು ನಕಲಿ ಎಂಬುದು ಸಾಬೀತಾಗಿದೆ. ಲೋಕಸೇವಾ ಆಯೋಗವು ಕಿಶನ್ ಸಲ್ಲಿಸಿದ್ದ ಪ್ರಮಾಣಪತ್ರ ನಕಲಿ ಎಂದು ಖಚಿತಪಡಿಸಿದೆ. ಪ್ರಮಾಣಪತ್ರ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಮೂಲ ಪ್ರಮಾಣಪತ್ರ ಸಲ್ಲಿಸುವಂತೆ ಇಲಾಖೆಯು ಕಿಶನ್‍ಗೆ ನೋಟಿಸ್ ನೀಡಿತ್ತು.

ಮೌಖಿಕವಾಗಿಯೂ ಸೂಚನೆ ನೀಡಲಾಗಿತ್ತು. ನಂತರ ಇಲಾಖೆಯು ದೀರ್ಘಾವಧಿ ಅನಧಿಕೃತ ಗೈರುಹಾಜರಾದ ಹಿನ್ನೆಲೆಯಲ್ಲಿ ಹಾಗೂ ಅಕೌಂಟ್ಸ್ ಹೈಯರ್ ಇಲಾಖಾ ಪರೀಕ್ಷೆ ತೇರ್ಗಡೆಯಾಗಿರುವ ಬಗ್ಗೆ ನಕಲಿ ಪ್ರಮಾಣಪತ್ರ ಸಲ್ಲಿಸಿದ ಆರೋಪ ಹೊರಿಸಿ ನಿಯಮಾನುಸಾರ ದೋಷರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com