ದೇಶಪಾಂಡೆ ವಿರುದ್ಧ 2 ದಿನಗಳಲ್ಲಿ ವರದಿ

ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧದ ಅರಣ್ಯಭೂಮಿ ಅತಿಕ್ರಮಣ ಪ್ರಕರಣ ಸಂಬಂಧಬೆಂಗಳೂರು...
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ

ಬೆಂಗಳೂರು:ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧದ ಅರಣ್ಯಭೂಮಿ ಅತಿಕ್ರಮಣ ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಡಳಿತ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ.ಜಿಲ್ಲಾಡಳಿತ 1935ರಿಂದ ಇಲ್ಲಿಯವರೆಗಿನ ಭೂ ದಾಖಲೆಗಳ ವಿವರ ಪರಿಶೀಲನೆ ನಡೆಸುತ್ತಿದ್ದು, ಜಿಲ್ಲಾಧಿಕಾರಿ ವಿ.ಶಂಕರ್ ಕಂದಾಯ ಇಲಾಖೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲಿದ್ದಾರೆ.

ಮಾಹಿತಿ ಪ್ರಕಾರ ಜಕ್ಕೂರು ಅಲ್ಲಾಳ ಸಂದ್ರದ 199 ಎಕರೆ ಜಾಗವನ್ನು 1935ರಲ್ಲಿ ಜಕ್ಕೂರು ಏರೋ ಡ್ರಮ್ ಉದ್ದೇಶಕ್ಕೆ ನೋಟಿಫೈ ಮಾಡಲಾಗಿದೆ. 1940ರಲ್ಲಿ ಈ ಎರಡು ಗ್ರಾಮದ ಒಟ್ಟು 327 ಎಕರೆ ಜಾಗದ ಪೈಕಿ 177 ಎಕರೆಯನ್ನು ಜಕ್ಕೂರು ಪ್ಲಾಂಟೇಶನ್ ಗಾಗಿ ಅರಣ್ಯ ಇಲಾಖೆಗೆ ನೀಡಲಾಗಿತ್ತು. ಈ ದಾಖಲೆ ಆಧಾರದ ಮೇಲೆ 75 ವರ್ಷದ ಬಳಿಕ ಸ್ಥಳೀಯ ಎಸಿಎಫ್ ಅವರು ತಹಶೀಲ್ದಾರರಿಗೆ ಪತ್ರ ಬರೆದು ಇದು ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದ್ದು, ಹಕ್ಕುಪತ್ರ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದೇ ಜಾಗ ಈಗ ಒತ್ತುವರಿಯಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com