ಕಾರ್ತಿಕ್ ರೇಪ್ ಮಾಡಿಲ್ಲ: ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ
ಬೆಂಗಳೂರು: ಕೇಂದ್ರ ಕಾನೂನು ಸಚಿವ ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ನೀಡಿದ್ದ ಅತ್ಯಾಚಾರ, ಮದುವೆಯಾಗಿ ವಂಚನೆ ಆರೋಪ ದೂರಿಗೆ ಸಂಬಂಧಿಸಿದಂತೆ ಆರ್.ಟಿ ನಗರ ಪೊಲೀಸರು ನ್ಯಾಯಾಲಯಕ್ಕೆ ಚಾಜ್ರ್ ಶೀಟ್ ಸಲ್ಲಿಸಿದ್ದು ಅತ್ಯಾಚಾರ ಹಾಗೂ ಮದುವೆ ಆರೋಪದ ಬಗ್ಗೆ ಕಾರ್ತಿಕ್‍ಗೆ ಕ್ಲೀನ್‍ಚಿಟ್ ನೀಡಿದ್ದಾರೆ.
ಸೆ.18ರಂದು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ 632 ಪುಟಗಳ ಚಾಜ್ರ್ ಶೀಟ್ ಸಲ್ಲಿಕೆ ಮಾಡಿದ್ದು ಮೈತ್ರಿಯಾ ಗೌಡ ಮೇಲೆ ಕಾರ್ತಿಕ್ ಗೌಡ ಅತ್ಯಾಚಾರ ನಡೆಸಿರುವುದಕ್ಕೆ ಹಾಗೂ ಮದುವೆ ಆಗಿದ್ದೇವೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಉಲ್ಲೇಖಿಸಿದ್ದಾರೆ.
ವೈದ್ಯಕೀಯ ಸಾಕ್ಷ್ಯಾಧಾರ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ನೇರ, ಪರೋಕ್ಷ ಅಥವಾ ಸಾಂದರ್ಭಿಕ ಸಾಕ್ಷ್ಯಗಳು ಸಿಕ್ಕಿಲ್ಲ . ಆದರೆ, ಮೊಬೈಲ್ ಫೋನ್‍ನಲ್ಲಿ ಮಾತಾಡುವಾಗ ಮದುವೆಯಾಗುವುದು ಹಾಗೂ ಮಕ್ಕಳು ಮಾಡಿಕೊಳ್ಳುವ ಬಗ್ಗೆ ಸಂಭಾಷಣೆ ನಡೆದಿದೆ. ಹೀಗಾಗಿ, ಈ ಆಧಾರದ ಮೇಲೆ ನಂಬಿಕೆ ವಂಚನೆ (ಐಪಿಸಿ ಕಲಂ 417) ಅನ್ವಯ ಮಾತ್ರ ಚಾಜ್ರ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ಕಾರ್ತಿಕ್‍ಗೆ ಅಲ್ಪ ಸಮಾಧಾನ ಸಿಕ್ಕಿದೆ. ಆದರೆ, ವಂಚನೆ ಪ್ರಕರಣದಲ್ಲಿ ಚಾರ್ಜ್‍ಶೀಟ್ ದಾಖಲಾಗಿದ್ದು ಕಾನೂನು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಮದುವೆಯಾಗುವುದಾಗಿ ನಂಬಿಸಿದ್ದ ಕಾರ್ತಿಕ್ ಗೌಡ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ ಮೈತ್ರಿಯಾ ಗೌಡ 2014ರ ಆಗಸ್ಟ್‍ನಲ್ಲಿ ಆರ್.ಟಿ.ನಗರ ಪೊಲೀಸರಿಗೆ ದೂರು ನೀಡಿದ್ದರು. ಐಪಿಸಿ ಕಲಂ 376 ಹಾಗೂ 420 ಅನ್ವಯ ಎಫ್ಐಆರ್ ದಾಖಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ