ಜಿಪಂ-ತಾಪಂ ಚುನಾವಣೆಗಳಿಗೆ ಸಾರ್ವತ್ರಿಕ ರಜೆ

ರಾಜ್ಯದ 30 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲೂಕು ಪಂಚಾಯಿತಿಗಳಿಗೆ ಈ ತಿಂಗಳ 13 ಮತ್ತು 20ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 30 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲೂಕು ಪಂಚಾಯಿತಿಗಳಿಗೆ ಈ ತಿಂಗಳ 13 ಮತ್ತು 20ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿ,ಕಾರ್ಖಾನೆಗಳು, ಕೈಗಾರಿಕೆ ಸಂಸ್ಥೆ, ಶಿಕ್ಷಣ ಸಂಸ್ಥೆ, ಶಾಲೆ-ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಘೊಷಿಸಲಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಿಗೆ ಈ ರಜೆ ಅನ್ವಯವಾಗುವುದಿಲ್ಲ. ಬ್ಯಾಂಕ್​ಗಳು, ಜೀವ ವಿಮಾ ನಿಗಮ, ಬಿಸಿನೆಸ್ ಟ್ರೇಡ್, ಇಂಡಸ್ಟ್ರಿಯಲ್ ಅಂಡರ್​ಟೇಕಿಂಗ್ ಅಥವಾ ಇನ್ನಿತರ ಎಸ್ಟಾಬ್ಲಿಷ್​ಮೆಂಟ್​ಗಳಲ್ಲಿ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನದ ದಿನ ವೇತನ ಸಹಿತ ರಜೆಗೆ ಅರ್ಹರಾಗಿರುತ್ತಾರೆ.

ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿದ್ದಲ್ಲಿ ಫೆಬ್ರವರಿ 12 ಮತ್ತು 19 ರಂದು ಪೂರ್ವ ತಯಾರಿ ಹಿನ್ನಲೆಯಲ್ಲಿ ಮತ್ತು ಅವಶ್ಯಕತೆಯಿದ್ದಲ್ಲಿ ಮತ ಎಣಿಕೆ ದಿನದಂದು ಸಹ ರಜೆ ಘೋಷಿಸಲು ರಾಜ್ಯ ಚುನಾವಣಾ ಆಯೋಗ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com