ರಾಜ್ಯದ ಮೊದಲ ಹೆಲಿ ಟೂರಿಸಂಗೆ ಉಡುಪಿಯಲ್ಲಿ ಚಾಲನೆ

ರಾಜ್ಯದಲ್ಲಿ ಮೊದಲ ಹೆಲಿಕಾಪ್ಟರ್ ಮೂಲಕ ಪ್ರವಾಸೋದ್ಯಮಕ್ಕೆ(ಹೆಲಿ ಟೂರಿಸಂ) ಉಡುಪಿ ಜಿಲ್ಲೆಯಲ್ಲಿ ನಿನ್ನೆ ಚಾಲನೆ...
ಹೆಲಿ ಟೂರಿಸಂ ಭಾಗವಾಗಿ ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸಿದಾಗ ಮಲ್ಪೆ ಮೀನುಗಾರಿಕೆ ಬಂದರು ಮತ್ತು ಉದ್ಯಾವರ ಸೇತುವೆ ಕಂಡುಬಂದ ಬಗೆ
ಹೆಲಿ ಟೂರಿಸಂ ಭಾಗವಾಗಿ ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸಿದಾಗ ಮಲ್ಪೆ ಮೀನುಗಾರಿಕೆ ಬಂದರು ಮತ್ತು ಉದ್ಯಾವರ ಸೇತುವೆ ಕಂಡುಬಂದ ಬಗೆ

ಉಡುಪಿ: ರಾಜ್ಯದಲ್ಲಿ ಮೊದಲ ಹೆಲಿಕಾಪ್ಟರ್ ಮೂಲಕ ಪ್ರವಾಸೋದ್ಯಮಕ್ಕೆ(ಹೆಲಿ ಟೂರಿಸಂ) ಉಡುಪಿ ಜಿಲ್ಲೆಯಲ್ಲಿ ನಿನ್ನೆ ಚಾಲನೆ ನೀಡಲಾಯಿತು. ದೆಹಲಿ ಮೂಲದ ಚಿಪ್ಸನ್ ಏವಿಯೇಷನ್ ಕಂಪೆನಿ ಉಡುಪಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಈ ಸೇವೆ ಆರಂಭಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿನ ಪ್ರಾಕೃತಿಕ, ಐತಿಹಾಸಿಕ, ಪಾರಿಸರಿಕ ಸ್ಥಳಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯವನ್ನು ದೇಶದಲ್ಲಿ ಗುರುತಿಸುವಂತೆ ಮಾಡಿದೆ. ಕರ್ನಾಟಕದ ಸಮುದ್ರ ತೀರದಲ್ಲಿ ಮತ್ತು ಪಶ್ಚಿಮ ಘಟ್ಟದಲ್ಲಿ ಸಾಹಸ ಪ್ರವಾಸೋದ್ಯಮದ ಅಭಿವೃದ್ಧಿಗೆ, ಹೊರ ರಾಜ್ಯದ ಮತ್ತು ವಿದೇಶಿ ವಿದ್ಯಾರ್ಥಿಗಳಿಂದ ವ್ಯಾವಹಾರಿಕ ಉದ್ದೇಶಕ್ಕೆ ಮತ್ತು ಮನರಂಜನೆಗಾಗಿ ಹೆಲಿ ಟೂರಿಸಂನ್ನು ಬಳಸಲಾಗಿದೆ ಎಂದು ಉಡುಪಿ ಡಿಸಿ ಡಾ.ಆರ್.ವಿಶಾಲ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಗಳಲ್ಲಿನ ಪ್ರಸಿದ್ಧ ದೇವಾಲಯಗಳಾದ ಕೊಲ್ಲೂರು ಮೂಕಾಂಬಿಕೆ, ಉಡುಪಿ ಕೃಷ್ಣ ಮಠ, ಮಣಿಪಾಲಕ್ಕೆ ಬರುವ ಕೆಲವು ಹೆಲಿಕ್ಯಾಪ್ಟರ್ ಇಳಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಹೆಲಿ ಟೂರಿಸಂಗೆ ಒಳ್ಳೆಯ ಅವಕಾಶವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com