ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ಪಿಎನ್ ಮಹೇಶ್ ಅಂತ್ಯಕ್ರಿಯೆ

ಸಿಯಾಚಿನ್ ನೀರ್ಗಲ್ಲು ದುರಂತದಲ್ಲಿ ಮಡಿದ ವೀರ ಯೋಧ ಹುತಾತ್ಮ ಸಿಪಾಯಿ ಪಿಎನ್ ಮಹೇಶ್ ಅವರ ಅಂತ್ಯಕ್ರಿಯೆ ಹುಟ್ಟೂರು ಪಶುಪತಿ ಗ್ರಾಮದಲ್ಲಿ...
ಮೃತ ಯೋಧ ಮಹೇಶ್ ಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಮೃತ ಯೋಧ ಮಹೇಶ್ ಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಯಾಚಿನ್ ನೀರ್ಗಲ್ಲು ದುರಂತದಲ್ಲಿ ಮಡಿದ ವೀರ ಯೋಧ ಹುತಾತ್ಮ ಸಿಪಾಯಿ ಪಿಎನ್ ಮಹೇಶ್ ಅವರ ಅಂತ್ಯಕ್ರಿಯೆ ಹುಟ್ಟೂರು ಪಶುಪತಿ ಗ್ರಾಮದಲ್ಲಿ ನಡೆಯಿತು.

ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕಿನ ಪಶುಪತಿ ಗ್ರಾಮದಲ್ಲಿ ಸಾವಿರಾರು ಮಂದಿ ವೀರಯೋಧ ಪಿಎನ್ ಮಹೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪಶುಪತಿ ಗ್ರಾಮದ ಮಹೇಶ ಅವರ ಜಮೀನಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಿ ಅಲ್ಲೇ ಅಂತಿಂಮ ಸಂಸ್ಕಾರ ನಡೆಸಲಾಯಿತು.

ಮಂಗಳವಾರ ಸಂಜೆ 4.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ವೀರಶೈವ ಸ್ವಾಮೀಜಿಗಳ ಮಾರ್ಗದರ್ಶನದಂತೆ ಮಹೇಶ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಡಿಸಿ ಶಿಖಾ, ಜಿಲ್ಲಾಧಿಕಾರಿ ಅಭಿನವ್ ಖರೆ ಸೇರಿದಂತೆ ಗ್ರಾಮಸ್ಥರು, ಗಣ್ಯರು ಅಂತಿಮ ದರ್ಶನ ಪಡೆದರು. ಸಾವಿರಾರು ಮಂದಿ ತಮ್ಮ ಅಶ್ರ ತರ್ಪಣ ಸಲ್ಲಿಸಿದರು. ಅಮರ್ ರಹೇ ಮಹೇಶ್ ಎಂಬ ಘೋಷಣೆಗಳು ಎಲ್ಲೆಡೆ ಕೇಳಿ ಬಂದವು. ಇನ್ನು ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿಗಳ ಚೆಕ್ ಅನ್ನು ಮೃತ ಕುಟುಂಬಕ್ಕೆ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com